Select Your Language

Notifications

webdunia
webdunia
webdunia
webdunia

ಗ್ವಾದಲಜಾರ್ ನ ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಲು ಕಾನೂನು ಸಮ್ಮತಿ

ಗ್ವಾದಲಜಾರ್ ನ ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಲು ಕಾನೂನು ಸಮ್ಮತಿ
ಮೆಕ್ಸಿಕೊ , ಗುರುವಾರ, 23 ಆಗಸ್ಟ್ 2018 (10:28 IST)
ಮೆಕ್ಸಿಕೊ : ಮೆಕ್ಸಿಕೋದ ಗ್ವಾದಲಜಾರ್ ನಗರದ  ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಲು ಕಾನೂನು ಒಪ್ಪಿಗೆ ನೀಡಿದೆಯಂತೆ.


ಹೌದು. ಗ್ವಾದಲಜಾರ್ ಸಂಪ್ರದಾಯವಾದಿಗಳ ನಗರವಾಗಿದ್ದು, ಅಲ್ಲಿ 15 ಲಕ್ಷ ಮಂದಿ ವಾಸವಾಗಿದ್ದಾರೆ. ಆದರೆ ಅಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದ ಜೋಡಿಗಳನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸುತ್ತಿದ್ದರು. ಪೊಲೀಸ್ ಈ ಕ್ರಮ ಅಲ್ಲಿನವರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯ ಸಂಸ್ಥೆಯೊಂದರ  ಸಮೀಕ್ಷೆಯ ಪ್ರಕಾರ ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಪೊಲೀಸ್ ಕ್ರಮವನ್ನು ವಿರೋಧಿಸಿದ್ದರು. ಅನೈತಿಕ ಕಾರ್ಯ ಚಟುವಟಿಕೆ ಹೆಸರಿನಲ್ಲಿ ಬಂಧಿಸಲಾಗ್ತಿದೆ ಎಂದು ದೂರಿದ್ದರು. 


ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ “ಶಾರೀರಿಕ ಸಂಬಂಧ ಬೆಳೆಸಿದ ಜೋಡಿಯಿಂದ ತೊಂದರೆಯಾಗಿದೆ ಎನ್ನುವ ಬಗ್ಗೆ ನಾಗರಿಕರು ದೂರು ನೀಡದೆ ಹೋದಲ್ಲಿ ಅದು ಅಪರಾಧವಲ್ಲವೆಂದು" ಕಾನೂನು ತಿದ್ದುಪಡಿ ಮಾಡಲಾಗಿದೆ. ಇದರಿಂದ ಗ್ವಾದಲಜಾರ್ ನಗರದ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಗಳು ಒಂದಾಗಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದುವರಿದ ಸಿಎಂ ಎಚ್ ಡಿಕೆ ಟೆಂಪಲ್ ರನ್: ಇಂದು ಎಲ್ಲಿಗೆ ಗೊತ್ತಾ?