ತನ್ನ ಆಸೆ ಈಡೇರಿಸಲು ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲಿದ್ದಾನಂತೆ ಈತ

ಗುರುವಾರ, 1 ನವೆಂಬರ್ 2018 (14:34 IST)
ಕೊಲಂಬಿಯಾ : ಕೊಲಂಬಿಯಾ ಮೂಲದ 22 ವರ್ಷದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲು ಹೊರಟಿದ್ದಾನಂತೆ. ಇದಕ್ಕೆ ಕಾರಣವೇನೆಂದು ಕೇಳಿದ್ರೆ ಶಾಕ್ ಆಗ್ತೀರಾ.


ಕೊಲಂಬಿಯಾದ ಎರಿಕ್ ಹಿನ್‌ ಕ್ಯಾಪಿ ರಮಿರೇಝ್ ಎಂಬಾತನು ತನ್ನ 12ನೇ ವಯಸ್ಸಿನಲ್ಲಿ ತಾಯಿ ಮೃತಪಟ್ಟ ಬಳಿಕ ತನ್ನ ದೇಹವನ್ನು ರೂಪಾಂತರಗೊಳಿಸಲು ಆರಂಭಿಸಿದ್ದಾನಂತೆ. ಬೆನ್ನ ಮೇಲೆ ತಾಯಿಯ ಮುಖದ ಟ್ಯಾಟೂವನ್ನು ಮೊದಲು ಹಾಕಿಸಿಕೊಂಡಿದ್ದ. ನಂತರದ ದಿನಗಳಲ್ಲಿ ಆತನಿಗೆ ತಾನು ಜೀವಂತ ಅಸ್ತಿಪಂಜರದಂತೆ ಕಾಣಬೇಕೆಂಬ ವಿಚಿತ್ರ ಬಯಕೆ ಹುಟ್ಟಿತಂತೆ.


ಅದಕ್ಕಾಗಿ ಆತ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಿ ಕಿವಿ, ಮೂಗನ್ನು ತೆಗೆಸಿಕೊಂಡಿದ್ದಾನೆ. ಜತೆಗೆ ಮುಖದ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾನೆ. ಆದರೆ ಇದೀಗ ಅದಕ್ಕಾಗಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲಿದ್ದಾನಂತೆ. ಈ ಬಗ್ಗೆ ಸಂತಸದಿಂದ ಎರಿಕ್ ‘ನಾನೀಗ ಮರ್ಮಾಂಗವನ್ನು ಕತ್ತರಿಸಿಕೊಂಡರೆ ಸಂಪೂರ್ಣವಾಗಿ ಫ್ಲಾಟ್ ಆಗಲಿದ್ದೇನೆ’ ಎನ್ನುತ್ತಿದ್ದಾನೆ. ಹಾಗೇ ಜೀವಂತ ಸಮಾಧಿ ಈತನ ಮುಂದಿನ ಕನಸಂತೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಬಿಜೆಪಿಗೆ ಮಾಡಿದ ಈ ದ್ರೋಹದಿಂದ ಚಂದ್ರಶೇಖರ್ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ ಕಿಡಿಕಾರಿದ ಸದಾನಂದಗೌಡ