Select Your Language

Notifications

webdunia
webdunia
webdunia
webdunia

ಜೀತ ಪದ್ಧತಿಯ ಮೂಲಕ ವ್ಯಕ್ತಿಯನ್ನು ಕೂಡಿ ಹಾಕಿದ ಪ್ರೊಫೆಸರ್ ದಂಪತಿಯ ಬಂಧನ

ಜೀತ ಪದ್ಧತಿಯ ಮೂಲಕ ವ್ಯಕ್ತಿಯನ್ನು ಕೂಡಿ ಹಾಕಿದ ಪ್ರೊಫೆಸರ್ ದಂಪತಿಯ ಬಂಧನ
ಬೆಂಗಳೂರು , ಸೋಮವಾರ, 5 ನವೆಂಬರ್ 2018 (12:41 IST)
ಲಂಡನ್ : ಹಿಂದಿನ ಕಾಲದಿಂದಯೂ ಜೀತ ಪದ್ಧತಿ ಭಾರತದಲ್ಲಿ ಜಾರಿಯಲ್ಲಿತ್ತು. ಆದರೆ ಇದೀಗ ಈ ಜೀತ ಪದ್ಧತಿಗೆ ಸಂಬಂಧಪಟ್ಟ ಪ್ರಕರಣವೊಂದು  ಇಂಗ್ಲೆಂಡ್ ನಲ್ಲಿಯೂ  ನಡೆದಿರುವುದಾಗಿ ತಿಳಿದುಬಂದಿದೆ.


ಹೌದು. ಭಾರತೀಯ ಮೂಲದ ಪಾಲ್ವಿಂದರ್ ಮತ್ತು ಪ್ರೀತ್ಪಾಲ್ ಬುನ್ನಿಂಗ್ ಎಂಬ 50 ವರ್ಷದ ಪ್ರೊಫೆಸರ್ ದಂಪತಿ ಇಂತಹ ಅನಿಷ್ಟ ಜೀತ ಪದ್ಧತಿಯ ಮೂಲಕ 45 ವರ್ಷದ ವ್ಯಕ್ತಿಯೊಬ್ಬನನ್ನು ಜೀತದಾಳಾಗಿ ಇರಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಮನೆಯ  ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ಆತನಿಗೆ ಅಲ್ಲಿ ಸರಿಯಾದ ವ್ಯವಸ್ಥೆ ಕೂಡ ನೀಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.


ಈ ಬಗ್ಗೆ ಮಾಹಿತಿ ಪಡೆದ ಇಂಗ್ಲೆಂಡ್ ನ ಗ್ಯಾಂಗ್ ಮಾಸ್ಟರ್ಸ್ ಮತ್ತು ಲೇಬರ್ ಅಬ್ಯೂಸ್ ಅಥಾರಿಟಿ ಕಾರ್ಯಾಚರಣೆ ನಡೆಸಿ ಕೂಡಿ ಹಾಕಿದ ವ್ಯಕ್ತಿಯನ್ನು ಬಿಡುಗಡೆಗೊಳಿಸಿ, ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಈ ದಂಪತಿಗೆ ಮಾನವ ಕಳ್ಳಸಾಗಣೆಯ ನಂಟು ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ್ರೆ, ಬಾಬ್ರಿ ಮಸೀದಿಯೂ ಆಗಲಿ- ಸಚಿವ ಜಮೀರ್ ಅಹ್ಮದ್