ಮಹಿಳೆಯರು ತಮ್ಮ ಸಂಗಾತಿಯಿಂದ ಬಯಸುವುದು ಇದನ್ನೇ!

ಮಂಗಳವಾರ, 4 ಡಿಸೆಂಬರ್ 2018 (09:14 IST)
ಬೆಂಗಳೂರು: ಮದುವೆಯಾಗುವ ಹುಡುಗನ ಬಗ್ಗೆ ಎಲ್ಲಾ ಹುಡುಗಿಯರು ಸಾವಿರಾರು ಕನಸು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಇಂದಿನ ಯುವತಿಯರು ತಮ್ಮ ಸಂಗಾತಿಯಿಂದ ನಿರೀಕ್ಷೆ ಮಾಡುವುದು ಏನನ್ನು ಎಂಬ ಬಗ್ಗೆ ವೈವಾಹಿಕ ವೆಬ್ ಸೈಟ್ ನಡೆಸಿದ ಸಮೀಕ್ಷೆಯಿಂದ ಒಂದು ವಿಚಾರ ಬೆಳಕಿಗೆ ಬಂದಿದೆ.

ಭಾರತ್ ಮ್ಯಾಟ್ರಿಮೋನಿಯಲ್ ಸೈಟ್ ಮಹಿಳೆಯರು ತಮ್ಮ ಸಂಗಾತಿ ಬಳಿಯಲ್ಲಿ ಏನನ್ನು ನಿರೀಕ್ಷೆ ಮಾಡುತ್ತಾರೆ ಎಂದು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 44 ಮಹಿಳೆಯರು ತಾವು ಸಂಗಾತಿಯಿಂದ ಸಮಾನತೆ ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ಮನೆ ನಡೆಸುವ ವಿಚಾರದಲ್ಲಿ, ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ, ಹಣಕಾಸಿನ ವಿಚಾರದಲ್ಲಿ ಸೇರಿದಂತೆ ಸಂಸಾರಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಸಂಗಾತಿ ತನ್ನ ಜತೆಗೆ ಕೆಲಸ ಹಂಚಿಕೊಳ್ಳಬೇಕು ಮತ್ತು ಸಂಗಾತಿಯಷ್ಟೇ ತನಗೂ ಸಮಾನ ಸ್ವಾತಂತ್ರ್ಯವಿರಬೇಕು ಎಂದು ಮಹಿಳೆಯರು ಬಯಸುತ್ತಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಟಾಯ್ಲೆಟ್ ಗಿಂತಲೂ ಮೊಬೈಲ್ ಫೋನ್ ಕೊಳಕು!