Select Your Language

Notifications

webdunia
webdunia
webdunia
webdunia

ದಿನಕ್ಕೊಂದು ಮೊಟ್ಟೆ ತಿನ್ನುವುದರ ಲಾಭವೇನು?

ದಿನಕ್ಕೊಂದು ಮೊಟ್ಟೆ ತಿನ್ನುವುದರ ಲಾಭವೇನು?
Bangalore , ಶನಿವಾರ, 29 ಏಪ್ರಿಲ್ 2017 (07:56 IST)
ಬೆಂಗಳೂರು: ನಮ್ಮ ದೇಹಕ್ಕೆ ವಿವಿಧ ರೀತಿಯ ವಿಟಮಿನ್ ಬೇಕು. ಇದಕ್ಕಾಗಿ ಯಾವೆಲ್ಲಾ ಆಹಾರ ಸೇವಿಸಬೇಕು ಎನ್ನುವ ಗೊಂದಲವೇ? ಹಾಗಿದ್ದರೆ, ಒಂದೇ ಒಂದು ಆಹಾರ ಸೇವಿಸಿದರೆ ಸಾಕು.

 
ಅದುವೇ ಮೊಟ್ಟೆ. ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಇದೊಂದನ್ನು ಸೇವಿಸಿದರೆ ಸಾಕು. ಎಲ್ಲಾ ರೀತಿಯ ಪೋಷಕಾಂಶಗಳು ಶರೀರಕ್ಕೆ ಸೇರ್ಪಡೆಯಾಗುವುದು.

ಮೊಟ್ಟೆಯಲ್ಲಿ ವಿಟಮಿನ್ ಡಿ, ಇ, ಕೆ ಮತ್ತು ಬಿ6 ಹೇರಳವಾಗಿರುವುದು. ಅಲ್ಲದೆ ಇದರಲ್ಲಿ ಕ್ಯಾಲ್ಶಿಯಂ, ಮೆಗ್ನೀಷಿಯಂ,  ಒಮೆಗಾ ಫ್ಯಾಟಿ ಆಸಿಡ್, ಕೋಪರ್, ಕಬ್ಬಿಣದಂಶ ಮತ್ತು ಝಿಂಕ್ ಸಾಕಷ್ಟಿದೆ. ಅಲ್ಲದೆ 5 ಗ್ರಾಂನಷ್ಟು ಆರೋಗ್ಯಕರ ಕೊಬ್ಬು ಇದೆ.

ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಲ್ಲದೆ ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಇದರಲ್ಲಿದೆ. ಮೆದುಳಿನ ಇತರ ಚಟುವಟಿಕೆಗಳಿಗೆ ಹಾಗೂ ಹೃದಯದ ಆರೋಗ್ಯಕ್ಕೂ ಮೊಟ್ಟೆ ಹೇಳಿ ಮಾಡಿಸಿದ ಆಹಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

106ನೇ ವಯಸ್ಸಿನಲ್ಲೂ ಯೂಟ್ಯೂಬ್`ನಲ್ಲಿ ವಿಶಿಷ್ಟ ಅಡುಗೆಗಳ ಮೂಲಕ ಗಮನ ಸೆಳೆದ ಮಸ್ತಾನಮ್ಮ