Select Your Language

Notifications

webdunia
webdunia
webdunia
webdunia

ಚರ್ಮ ಕಪ್ಪಾಗುವುದನ್ನು ತಡೆಯಲು ತ್ವರಿತ ಮನೆ ಮದ್ದು

ಚರ್ಮ ಕಪ್ಪಾಗುವುದನ್ನು ತಡೆಯಲು ತ್ವರಿತ ಮನೆ ಮದ್ದು
ದೆಹಲಿ , ಗುರುವಾರ, 8 ಸೆಪ್ಟಂಬರ್ 2016 (11:47 IST)
ಎಲ್ಲರ ಸೌಂದರ್ಯದ ಕಡೆಗೆ ಗಮನಹರಿಸುವುದು ಸಹಜ, ಬಿಸಿಲು,ಧೂಳು ಎಲ್ಲಾ ಸಮಸ್ಯೆಗಳಿಂದ ಮುಖ, ಕೈಕಾಲು ಕಪ್ಪಾಗಿ ಹೋಗುತ್ತವೆ. ಸುಡು ಬಿಸಿಲಿಗೆ, ಸನ್ ಬರ್ನ್ ನಿಂದಾಗಿ ಚರ್ಮ ಕಪ್ಪಾಗುವುದನ್ನು ತಡೆಯಲು, ಮುಖದ ಸೌಂದರ್ಯವನ್ನು ಹೆಚ್ಚಿಸಲು ಮನೆಯಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೈಸರ್ಗಿಕ ಮನೆ ಮದ್ದು ನಿಮಗಾಗಿ ಇಲ್ಲಿದೆ ಟಿಪ್ಸ್.
ತಣ್ಣಗಿನ ಹಾಲು
ಕೋಲ್ಡ್ ಮಿಲ್ಕ್ ಕೂಡ ಸನ್ ಬರ್ನ್ ನಿಂದಾಗುವ ಚರ್ಮಾ ಕಪ್ಪಾಗುವಿಕೆಯನ್ನು ತಡೆಗಟ್ಟಬಲ್ಲದ್ದು. ಇದು ಚರ್ಮಕ್ಕೆ ಉತ್ತಮವಾದದ್ದು, ತಣ್ಣಗಿರು ಹಾಲನ್ನು ಮುಖಕ್ಕೆ ಹಾಗೂ ಕೈಗಳಿಗೆ ಲೇಪಿಸುವುದರಿಂದ ಕಪ್ಪಾಗುವುಗುವುದನ್ನು ತಡೆಯಬಹುದು. ಮುಖ ತೊಳೆದು ಕಪ್ಪಾಗಿರುವ ಭಾಗಕ್ಕೆ ಹಾಲನ್ನು ಹಚ್ಚಿ 10ರಿಂದ 15 ನಿಮಿಷಗಳ ಬಿಟ್ಟು ತೊಳೆದುಕೊಳ್ಳಬೇಕು. 
 
ಮೊಸರು
ಮೊಸರು ಕೂಡ ಕಪ್ಪಗಿರುವ ಭಾಗಕ್ಕೆ ಸಹಾಯಕಾರಿಯಾಗಬಲ್ಲದ್ದು. ಬ್ಯಾಕ್ಟೇರಿಯಾಗಳಿಂದ ರಕ್ಷಣೆ ನೀಡಬಲ್ಲದಾಗಿದೆ. ಸನ್ ಬರ್ನ್ನಿಂದಾಗುವ ಚರ್ಮ ಕಪ್ಪಾಗುವುದನ್ನು ತಡೆಗಟ್ಟುತ್ತದೆ. ತಣ್ಣಗಿರುವ ಮೊಸರನ್ನು ಹಚ್ಚಿಕೊಂಡು 10ರಿಂದ 15 ನಿಮಿಷಗಳ ಕಾಲ ಬಿಟ್ಟು ತೊಳೆದುಕೊಳ್ಳಿ
 
ಮಿಲ್ಕ್, ಓಟ್ ಮೀಲ್ 
ಚರ್ಮದ ಉರಿಯೂತದ ಸಮಸ್ಯೆಯನ್ನು ಹಾಲು ಹಾಗೂ ಓಟ್ಸ್ ನಿವಾರಿಸಬಲ್ಲದ್ದು. ಇದು ಸುಟ್ಟ ಪ್ರದೇಶದಲ್ಲಿ ತಗ್ಗಿಸುತ್ತದೆ. ಹಾಗೂ ತ್ವರಿತವಾಗಿ ಸರಿಪಡಿಸಲು ಸಾಧ್ಯವಾಗುತ್ತದೆ. 
 
ಓಟ್ಸ್‌ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು.ಆಮೇಲೆ ಕಪ್ಪಾಗಿರುವ ಭಾಗಕ್ಕೆ 15-20ರಿಂದ ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
 
ಹಾಲು ಪುಡಿ ಬಾದಾಮಿ ಎಣ್ಣೆ ಪ್ಯಾಕ್ 
ಹಾಲಿನ ಪುಡಿಯಲ್ಲಿ ಬಾದಾಮಿ ಎಣ್ಣೆ ಪ್ಯಾಕ್ ಮಾಡಿಕೊಳ್ಳುವುದರಿಂದ ಸನ್ ಬರ್ನ್ ನಿಂದಾಗುವ ಹಲವು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ನಿಮ್ಮ ಮುಖವನ್ನು ಕ್ಲೀನ್ ಮಾಡುವಲ್ಲಿ ಇದು ಸಹಾಯಕಾರಿಯಾಗುತ್ತದೆ. ಮಿಲ್ಕ್ ಪೌಡರ್, ಬಾದಾಮಿ ಎಣ್ಣೆ, ನಿಂಬೆಹಣ್ಣು ಜ್ಯೂಸ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಈ ಪ್ಯಾಕ್‌ನ್ನು ಕಪ್ಪಾಗಿರುವ ಭಾಗಕ್ಕೆ ಹಚ್ಚಿಕೊಂಡು 20 ನಿಮಿಷಗಳ ಬಳಿಕ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು. 

ಬಿಳಿ ಮೊಟ್ಟೆ
ಬಿಳಿ ಮೊಟ್ಟೆಯ ಭಾಗವನ್ನು ಹಚ್ಚಿಕೊಳ್ಳುವುದರಿಂದ ಸನ್ ಬರ್ನ್ ಸಮಸ್ಯೆಯನ್ನು ತಪ್ಪಿಸಬಹುದು. ಮೊಟ್ಟೆಯನ್ನು ಬೇಯಿಸಿ, ಅನಂತರ ಅದರ ಬಿಳಿ ಭಾಗವನ್ನು ತೆಗೆದುಕೊಂಡು ಒಂದು ಟೀ ಸ್ಪೂನ್ ನಷ್ಟು ಆರಂಜ್ ಜ್ಯೂಸ್ ತೆಗೆದುಕೊಂಡು ಮೊಟ್ಟೆಯ ಬಿಳಿ ಭಾಗದಲ್ಲಿ ಮಿಕ್ಸ್ ಮಾಡಿ. ಹಚ್ಚಿಕೊಳ್ಳಬೇಕು, ಆಮೇಲೆ ತಣ್ಣಗಿನ ನೀರಿನಿಂದ ತೊಳೆಯಬೇಕು.ಬಿಸಿಲಿನ ತಾಪಕ್ಕೆ ಮುಖ ರಕ್ಷಣೆಗೆ ಇದನ್ನು ಮಾಡಿ ನೋಡಿ.
 
ಜೇನುತುಪ್ಪ 
ಜೇನುತುಪ್ಪವು ಸಹ ಹೈಡ್ರೋಪಾಲಿಕ್ ನಂತೆ ಕೆಲಸ ಮಾಡಬಲ್ಲದ್ದು, ಬಿಸಿಲಿನ ತಾಪಕ್ಕೆ ನಿಮ್ಮ ಮುಖ ಕಲೆಗಳಾಗಿದ್ದರೆ, ಅಥವಾ ಕಪ್ಪಾಗಿದ್ದರುೆ ಜೇನುತುಪ್ಪವನ್ನು ಹಚ್ಚಿಕೊಳ್ಳಬೇಕು. 
 
ತೆಂಗಿನ ಹಾಲು
ತೆಂಗಿನ ಹಾಲು ತ್ವರಿತವಾಗಿ ನಿಮ್ಮ ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ. ನಿತ್ಯವು ಕಪ್ಪಾಗಿರುವ ಭಾಗಕ್ಕೆ ತೆಂಗಿನ ನೀರು ಹಚ್ಚಿಕೊಳ್ಳಿ. ಇದರಿಂದ ಸನ್ ಬರ್ನ್ ನಿಂದಾಗುವ ಸಮಸ್ಯೆಯನ್ನು ತಪ್ಪಿಸಬಹುದು. 
ಬಿಸಿ ನೀರಿನಲ್ಲಿ 5 ನಿಮಿಷಗಳ ತೆಂಗಿನಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ. ಆ ಮೇಲೆ ಅದರಿಂದ ಬಂದ ಹಾಲನ್ನು ಪ್ರಿಡ್ಜ್ ನಲ್ಲಿಟ್ಟು ಬಳಿಕ ಉಪಯೋಗಿಸಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಸೌಂದರ್ಯಕ್ಕೆ ಮನೆಯಲ್ಲೇ ಪರಿಹಾರ!