Select Your Language

Notifications

webdunia
webdunia
webdunia
webdunia

ಎದೆಹಾಲು ಉತ್ಪತ್ತಿಯಾಗಲು ಬಾಣಂತಿಯರು ಈ ಮನೆಮದ್ದನ್ನು ಬಳಸಿ

ಎದೆಹಾಲು ಉತ್ಪತ್ತಿಯಾಗಲು ಬಾಣಂತಿಯರು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 6 ಫೆಬ್ರವರಿ 2019 (06:58 IST)
ಬೆಂಗಳೂರು : ತಾಯಿಯ ಹಾಲು ಮಕ್ಕಳಿಗೆ ತುಂಬಾ ಒಳ್ಳೇಯದು ಎನ್ನುತ್ತಾರೆ. ಆದರೆ ಕೆಲವು ತಾಯಂದಿರಲ್ಲಿ ತಮ್ಮ ಮಗುವಿಗೆ ಬೇಕಾಗುವಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾದ ಎದೆಹಾಲು ಸಿಗದೆ ಅದರ ಬೆಳೆವಣೆಗೆ ಕುಂಠಿತವಾಗುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ.


ಸೊಂಪು ತಾಯಿ ಹಾಲನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಬಾಣಂತಿಯರು ತಿನ್ನುವುದರಿಂದ ಚೆನ್ನಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ. 2 ಚಮಚ ಸೊಂಪನ್ನು 2 ಗ್ಲಾಸ್ ಗೆ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ತಣ್ಣಗಾದ ಮೇಲೆ ಸ್ವಲ್ಪ ಸಕ್ಕರೆ ಸೇರಿಸಿ ಊಟ ಆದ ಮೇಲೆ ಕುಡಿಯಿರಿ. ಹೀಗೆ ಪ್ರತಿದಿನ 3 ಬಾರಿ ಮಾಡಿ,


2 ಚಮಚ ಮೆಂತ್ಯಕಾಳನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಆ ನೀರಿನ ಜೊತೆಗೆ ಆ ಕಾಳನ್ನು ಅಗೆದು ತಿನ್ನಿ. ಬಾಣಂತಿಯರು  ಹೀಗೆ ಮಾಡಿದರೆ ಎದೆ ಹಾಲು ಚೆನ್ನಾಗಿ ಉತ್ಪತ್ತಿಯಾಗುತ್ತದೆ.


ಜೀರಿಗೆ ಕಷಾಯ ಕುಡಿಯುವುದರಿಂದ  ಬಾಣಂತಿಯರಲ್ಲಿ ಎದೆಹಾಲು ಉತ್ಪತ್ತಿಯಾಗುತ್ತದೆ. 1 ಚಮಚ  ಜೀರಿಗೆ ಪುಡಿ ಹಾಗೂ 1 ಚಮಚ  ಹಸುವಿನ ತುಪ್ಪ ಸೇರಿಸಿಕೊಂಡು ಪ್ರತಿದಿನ 2 ಬಾರಿ ತಿನ್ನಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆನೋವು ಸಮಸ್ಯೆಗೆ ಉತ್ತಮ ಪರಿಹಾರ ಬಿಸಿನೀರು. ಹೇಗೆ ಗೊತ್ತಾ?