ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ

ಸೋಮವಾರ, 3 ಡಿಸೆಂಬರ್ 2018 (12:41 IST)
ಬೆಂಗಳೂರು : ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆ ಇದ್ದಾಗ ಅವರಿಗೆ ಮಕ್ಕಳಾಗುವ ಸಾಧ್ಯತೆ ಕಮ್ಮಿ ಇರುತ್ತದೆ. ಅಂತವರು ತಮ್ಮ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಮನೆಮದ್ದನ್ನು ಬಳಸಿ.


ಮೊದಲಿಗೆ ದೊಡ್ಡಗಾತ್ರದ 1 ಈರುಳ್ಳಿ ತೆಗೆದುಕೊಂಡು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಅದಕ್ಕೆ ಶುದ್ಧ ಹಸುವಿನ ತುಪ್ಪ 20 ಗ್ರಾಂನಷ್ಟು ಹಾಕಿ ಚೆನ್ನಾಗಿ ಫ್ರೈ ಮಾಡಿ ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಅದನ್ನು ಒಂದು ಪ್ಲೇಟ್ ಗೆ ಹಾಕಿ ಅದಕ್ಕೆ 20 ಗ್ರಾಂನಷ್ಟು ಕಲ್ಲುಸಕ್ಕರೆ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಬೆಳಿಗ್ಗೆ ಹಾಗೂ ಸಂಜೆ 2 ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.


ಇದರ ಜೊತೆಗೆ, ½ ಕೆಜಿ ಉದ್ದಿನಬೇಳೆ ಗೆ 1ಟೀ ಚಮಚ ಹಸುವಿನ ತುಪ್ಪ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಪುಡಿ ಮಾಡಿಟ್ಟುಕೊಳ್ಳಿ. ಇದರಲ್ಲಿ 3 ಟೀ ಚಮಚ ಪುಡಿ ತೆಗೆದುಕೊಂಡು ಅದನ್ನು ಬಿಸಿಯಾದ 200ml ಹಸುವಿನ ಹಾಲಿಗೆ ಹಾಕಿ ಜೊತೆಗೆ 1ಟೀ ಚಮಚ ಕಲ್ಲುಸಕ್ಕರೆ ಪುಡಿ ಹಾಕಿ ಮಿಕ್ಸ್ ಮಾಡಿ ಅದನ್ನು ರಾತ್ರಿ ಊಟ ಆದ 1 ಗಂಟೆ ನಂತರ ಕುಡಿಯಿರಿ.


ಈ ಎರಡು ಮನೆಮದ್ದನ್ನು 45-60 ದಿನಗಳ ಕಾಲ ಮಾಡಲೇಬೇಕು. ಹಾಗೇ ಈ ಮನೆಮದ್ದನ್ನು ಬಳಸುತ್ತಿರುವಾಗ ಸಂಭೋಗ ಕ್ರಿಯೆಯಲ್ಲಿ ತೊಡಗಬಾರದು. ಆಗ ಮಾತ್ರ ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮಲಬದ್ಧತೆಯಿದ್ದರೆ ಈ ಸಿಂಪಲ್ ಡ್ರಿಂಕ್ ತಯಾರಿಸಿ ಸೇವಿಸಿ