ನೀವು ತಾಯಿಯಾಗಿಲ್ಲವೆಂದು ಕೊರಗುತ್ತಿದ್ದೀರಾ? ಹಾಗಾದ್ರೆ ಮೊದಲು ಈ ಮನೆಮದ್ದನ್ನು ಬಳಸಿ ಬಂಜೆತನ ನಿವಾರಿಸಿಕೊಳ್ಳಿ

ಗುರುವಾರ, 24 ಜನವರಿ 2019 (07:04 IST)
ಬೆಂಗಳೂರು : ಕೆಲವು ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಒತ್ತಡ, ಅತಿಯಾದ ತೂಕ, ಮುಟ್ಟಿನ ಸಮಸ್ಯೆ, ಹಾರ್ಮೋನ್ ಸಮಸ್ಯೆ, ಮುಂತಾದವು. ಈ ಸಮಸ್ಯೆಗಳಿರುವವರಿಗೆ ಮಕ್ಕಳಾಗುವುದಿಲ್ಲ. ಈ ಬಂಜೆತನ ನಿವಾರಣೆ ಮಾಡಲು ಈ ಮನೆಮದ್ದನ್ನು ಬಳಸಿದರೆ 90% ಮಕ್ಕಾಗುವ ಸಾಧ್ಯತೆ ಇರುತ್ತದೆ.

ಆಲದಮರದ ತೊಗಟೆಯನ್ನು ತಂದು ಅದರ ಮೇಲಿನ ಪದರವನ್ನು ತೆಗೆದು ಚೆನ್ನಾಗಿ ಸ್ವಚ್ಚ ಮಾಡಿ 1ಗಂಟೆ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಬೆಳಿಗ್ಗೆ ಈ ಪುಡಿಯನ್ನು 2 ಚಮಚ ತೆಗೆದುಕೊಂಡು ಉಗುರುಬೆಚ್ಚಗಿನ ಹಾಲಿನಲ್ಲಿ  ಚೆನ್ನಾಗಿ ಮಿಕ್ಸ್ ಮಾಡಿ  ಸಕ್ಕರೆ ಹಾಕದೇ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು 3-4 ತಿಂಗಳು ಮಾಡಿದರೆ ಸಾಕು ನಿಮ್ಮ ಬಂಜೆತನ ನಿವಾರಣೆಯಾಗುತ್ತದೆ. ಆದರೆ ಇದನ್ನು ಮುಟ್ಟಿನ ಸಮಯದಲ್ಲಿ ಮಾತ್ರ ಮಾಡಲೇಬಾರದು.

 

3 ಟೇಬಲ್ ಚಮಚ  ಕಪ್ಪು ಎಳ್ಳು ತೆಗೆದುಕೊಂಡು ಅದಕ್ಕೆ ಬೆಲ್ಲ  ಸೇರಿಸಿಕೊಂಡು ಪ್ರತಿದಿನ ತಿನ್ನಬೇಕು. ಇದರಿಂದ ನಿಮ್ಮ ಗರ್ಭಾಶಯದಲ್ಲಿರುವ ಸಮಸ್ಯೆ ಆಗಿ ಅಂಡಾಣು ರಿಲೀಸ್ ಆಗುವಂತೆ ಮಾಡುತ್ತದೆ. ಆದರೆ ಇದನ್ನು ಕೂಡ ಮುಟ್ಟಿನ ಸಮಯದಲ್ಲಿ ಮಾತ್ರ ತಿನ್ನಬಾರದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING