Select Your Language

Notifications

webdunia
webdunia
webdunia
webdunia

ಕಿಡ್ನಿಯಲ್ಲಿರುವ ಕಲ್ಲನ್ನು 3 ದಿನದಲ್ಲಿ ಕರಗಿಸುತ್ತದೆ ಈ ಕಷಾಯ

ಕಿಡ್ನಿಯಲ್ಲಿರುವ ಕಲ್ಲನ್ನು 3 ದಿನದಲ್ಲಿ ಕರಗಿಸುತ್ತದೆ ಈ ಕಷಾಯ
ಬೆಂಗಳೂರು , ಸೋಮವಾರ, 31 ಡಿಸೆಂಬರ್ 2018 (07:12 IST)
ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಇದರಿಂದ ತುಂಬಾ ನೋವು ಕಾಣಿಸುತ್ತದೆ. ಇದನ್ನು ಮನೆಮದ್ದಿನಿಂದ ಮೂರೇ ದಿನದಲ್ಲಿ ನಿವಾರಣೆ ಮಾಡಬಹುದು. ಈ ಮನೆಮದ್ದನ್ನು ತಯಾರಿಸುವ ವಿಧಾನ ಇಲ್ಲಿದೆ.

ಶರಪುಂಕ ಗಿಡ (wild indigo). ಇದು ಹಳ್ಳಿಕಡೆ ಹೆಚ್ಚಾಗಿ ಸಿಗುತ್ತದೆ. ಈ ಗಿಡದ ಬೇರನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಡಿ. ಒಂದು ವೇಳೆ ಈ ಗಿಡ ಸಿಗದೆ ಇದ್ದರೆ ಆಯುರ್ವೇದ ಶಾಪ್ ನಲ್ಲಿ ಶರಪುಂಕ ರೂಟ್ ಪೌಡರ್ ಸಿಗುತ್ತೆ. ಇದರಲ್ಲಿ 3 ಗ್ರಾಂನಷ್ಟು ಪೌಡರ್ ತೆಗೆದುಕೊಳ್ಳಿ, ಹಾಗೇ ಸೈಂಧವ ಲವಣ 3ಗ್ರಾಂ, ಹುರುಳಿ ಕಾಳು 1ಟೇಬಲ್ ಸ್ಪೂನ್ ತೆಗೆದುಕೊಂಡು ಅದನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಈ ಮೂರನ್ನು ಸೇರಿಸಿ ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ.

 

ನಂತರ 600ml  ನೀರನ್ನು ತೆಗೆದುಕೊಂಡು ಕುದಿಸಿ ಅದಕ್ಕೆ ಈ ಪೇಸ್ಟ್ ಹಾಕಿ ನೀರು 300ml ಬರುವ ತನಕ ಚೆನ್ನಾಗಿ ಕುದಿಸಿ. ನಂತರ ಈ ಕಷಾಯವನ್ನು ಸೋಸಿ ಬೆಳಿಗ್ಗೆ 100ml , ಮಧ್ಯಾಹ್ನ 100ml, ಹಾಗೂ ರಾತ್ರಿ 100ml ಊಟಕ್ಕಿಂತ 1 ಗಂಟೆ ಮೊದಲು ಕುಡಿಯಬೇಕು. ಇದೇರೀತಿ 3 ದಿನ ಮಾಡಿದರೆ ಕಿಡ್ನಿಯಲ್ಲಿರುವ ಸ್ಟೋನ್ ಕರಗುತ್ತದೆ.  

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಎಣ್ಣೆ