Select Your Language

Notifications

webdunia
webdunia
webdunia
webdunia

ಇದೂ ಗರ್ಭಿಣಿಯಾಗಿರುವುದರ ಲಕ್ಷಣಗಳಿರಬಹುದು!

ಇದೂ ಗರ್ಭಿಣಿಯಾಗಿರುವುದರ ಲಕ್ಷಣಗಳಿರಬಹುದು!
ಬೆಂಗಳೂರು , ಸೋಮವಾರ, 24 ಸೆಪ್ಟಂಬರ್ 2018 (09:32 IST)
ಬೆಂಗಳೂರು: ವಾಂತಿ ಮಾಡಿಕೊಳ್ಳುವುದು, ತಲೆ ಸುತ್ತಿ ಬೀಳುವುದು, ಮುಟ್ಟು ಬಾರದೇ ಇರುವುದು  ಇದಷ್ಟೇ ಗರ್ಭಿಣಿಯಾಗಿರುವುದರ ಲಕ್ಷಣಗಳಲ್ಲ. ಬೇರೆ ಕೆಲವು ಲಕ್ಷಣಗಳೂ ಗರ್ಭಿಣಿಯಾಗಿರುವುದರ ಲಕ್ಷಣಗಳಾಗಿರಬಹುದು.

ಸ್ತನ ಗಾತ್ರ ಬದಲಾವಣೆ
ಸಾಮಾನ್ಯವಾಗಿ ಮುಟ್ಟಿನ ದಿನಗಳು ಸಮೀಪ ಬಂದಾಗ ಸ್ತನ ಗಾತ್ರ ಬದಲಾವಣೆಯಾಗುವುದು, ಗಟ್ಟಿಯಾಗುವುದು, ನೋವು ಸಾಮಾನ್ಯ. ಇದು ಗರ್ಭಿಣಿಯಾಗಿರುವುದರ ಲಕ್ಷಣವಿರಬಹುದು.

ಸ್ವಲ್ಪ ಮಟ್ಟಿನ ಬ್ಲೀಡಿಂಗ್
ಮುಟ್ಟಿನ ಸ್ರಾವಕ್ಕಿಂತಲೂ ಕಡಿಮೆ, ಅಂದರೆ ಸ್ವಲ್ಪವೇ ಬ್ಲೀಡಿಂಗ್ ಆಗುತ್ತಿದ್ದರೂ ಇದು ಗರ್ಭ ಧರಿಸುವುದರ ಲಕ್ಷಣವಾಗಿರಬಹುದು.

ಕಾಲು ನೋವು
ಕಾಲು, ತೊಡೆ ಸೆಳೆತವಿದ್ದರೂ ಗರ್ಭಿಣಿಯೇ ಎಂದು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ನಿದ್ರೆ
ಹಗಲು ಹೊತ್ತು ವಿಪರೀತ ತೂಕಡಿಸುವುದು, ರಾತ್ರಿ ನಿದ್ರೆ ಮಾಡದೇ ಹೊರಳಾಡಬೇಕಾಗುವುದು. ಇಂತಹ ಲಕ್ಷಣಗಳಿದ್ದರೂ ಅವಾಯ್ಡ್ ಮಾಡಬೇಡಿ.

ಆಗಾಗ ಟಾಯ್ಲೆಟ್ ಬಳಕೆ
ಆಗಾಗ ಟಾಯ್ಲೆಟ್ ಗೆ ಹೋಗಬೇಕೆಂದನಿಸುವುದು, ಹೊಟ್ಟೆಯಲ್ಲಿ ಅಸಿಡಿಟಿ ತುಂಬಿದಂತಾಗುವುದು ಇತ್ಯಾದಿ ಕೂಡಾ ಗರ್ಭಿಣಿಯರ ಲಕ್ಷಣಗಳೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಗಮದ ಬಿಸಿ ಏರಬೇಕಾದರೆ ಇದನ್ನು ಸೇವಿಸಿ!