Select Your Language

Notifications

webdunia
webdunia
webdunia
webdunia

ಈ ರೋಗಗಳಿಗೆ ರಾಮಬಾಣ ಕಲ್ಲಂಗಡಿ ಹಣ್ಣಿನ ಬೇಜ

ಈ ರೋಗಗಳಿಗೆ ರಾಮಬಾಣ ಕಲ್ಲಂಗಡಿ ಹಣ್ಣಿನ ಬೇಜ
ಬೆಂಗಳೂರು , ಬುಧವಾರ, 6 ಜೂನ್ 2018 (17:49 IST)
ಕಲ್ಲಂಗಡಿ ಹಣ್ಣು ಬಾಯಾರಿಕೆ ನಿವಾರಿಸುವುದು ಮಾತ್ರವಲ್ಲ, ಇನ್ನೂ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಕಲ್ಲಂಗಡಿ ಕ್ಯಾಲ್ಷಿಯಂ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಸಿ, ಮೇದಸ್ಸು ಮತ್ತು ಸಸಾರಜನಕವನ್ನು ಹೊಂದಿದೆ.
- ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
 
ಕಲ್ಲಂಗಡಿ ಹಣ್ಣುಗಳನ್ನು ನಿರಂತರವಾಗಿ ಸೇವನೆ ಮಾಡಿದರೆ ಹೃದಯ ರೋಗಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‌ ನಿವಾರಣೆಯಾಗಿ ಹೃದಯ ಆರೋಗ್ಯಯುತವಾಗುತ್ತದೆ. 
 
- ದೇಹದ ತೂಕವನ್ನು ಇಳಿಸುತ್ತದೆ
 
ಕಲ್ಲಂಗಡಿ ಬೀಜದಲ್ಲಿರುವ ಅಮೈನೋ ಆಮ್ಲವು ಅರ್ಜಿನೈನ್ ಆಗಿ ಪರಿವರ್ತನೆ ಆಗುತ್ತದೆ ಇದು ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ. ಇದು ಕಡಿಮೆ ಕ್ಯಾಲರಿ ಹೊಂದಿರುವ ಕಾರಣ ತೂಕ ಇಳಿಸಿಕೊಳ್ಳುವವರಿಗೆ ಬಹಳ ಒಳ್ಳೆಯದು.
 
- ಕೂದಲು ಆರೋಗ್ಯಕ್ಕೆ ಉತ್ತಮ
 
ಕಲ್ಲಂಗಡಿ ಬೀಜದಲ್ಲಿ ಫಾಲಿಕ್ ಆಸಿಡ್ ಇರುವುದರಿಂದ, ಇದರ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಉದುರುವುದು ನಿಲ್ಲುತ್ತದೆ. ಹೊಟ್ಟು ಕಡಿಮೆಯಾಗಿ ಕೂದಲು ಬೆಳೆಯುತ್ತದೆ.
ಕಲ್ಲಂಗಡಿ ಬೀಜದ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಮೊಡವೆಗಳು, ಕೊಳೆ ಮತ್ತು ಮೃತ ಚರ್ಮ ಜೀವಕೋಶಗಳು ನಿವಾರಣೆಯಾಗುತ್ತವೆ.
 
- ರಕ್ತದೊತ್ತಡವನ್ನು ಇಳಿಸುತ್ತದೆ
 
ಕಲ್ಲಂಗಡಿ ಬೀಜದಲ್ಲಿರುವ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಅಂಶದಿಂದಾಗಿ ರಕ್ತದೊತ್ತಡವನ್ನು  ಕಡಿಮೆಯಾಗಿಸುತ್ತದೆ. ಪೊಟ್ಯಾಶಿಯಂನಿಂದ ಖಿನ್ನತೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
 
- ದೇಹಕ್ಕೆ ಶಕ್ತಿ ನೀಡುತ್ತದೆ
ಕಲ್ಲಂಗಡಿ ಬೀಜಗಳು ಎಲ್ ಸಿಟ್ರುಲ್ಲೈನ್ ಎಂಬ ಅಮೈನೋ ಆಮ್ಲವನ್ನು ಹೊಂದಿದ್ದು ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ದೇಹದ ಚೈತನ್ಯ ಹೆಚ್ಚಿ ಸುಸ್ತು ಮಾಯವಾಗುವುದು ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.
 
- ಕಿಡ್ನಿಯ ಆರೋಗ್ಯಕ್ಕೆ ಉತ್ತಮ
ಕಲ್ಲಂಗಡಿ ಬೀಜದಲ್ಲಿರುವ ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.
 
- ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕಲ್ಲಂಗಡಿ ಬೀಜದಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಸಹಾಯಮಾಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿಯ ಆರೋಗ್ಯಕರ ಉಪಯೋಗಗಳು