Webdunia - Bharat's app for daily news and videos

Install App

ಗರ್ಭಿಣಿ ಮಹಿಳೆಯರ ಆಹಾರ ವಿಧಾನ ಹೇಗಿರಬೇಕು...!?

Webdunia
ಗುರುವಾರ, 26 ಜುಲೈ 2018 (13:31 IST)
ಗರ್ಭಿಣಿಯರು ತಾವು ಏನು ತಿನ್ನುತ್ತಿದ್ದೇವೆ ಎನ್ನುವುದರ ಮೇಲೆ ವಿಶೇಷವಾದ ಗಮನವನ್ನು ಹರಿಸಬೇಕಾಗುತ್ತದೆ. ಏಕೆಂದರೆ ಅವರು ಸೇವಿಸುವ ಆಹಾರವು ಮಗುವಿನ ಮೇಲೆಯೂ ಸಹ ಪರಿಣಾಮವನ್ನು ಬೀರುತ್ತದೆ. ಗರ್ಭವತಿಯರಾದ ನಂತರ ಮಹಿಳೆಯರಿಗೆ ತಮ್ಮ ನಡೆನುಡಿಗಳನ್ನು ಮತ್ತು ಆಹಾರ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.
*ಬೆಳಗಿನ ತಿಂಡಿಯನ್ನು ಮರೆಯಬಾರದು:
 ಧಾನ್ಯಗಳು ಮತ್ತು ಹಣ್ಣುಗಳಿಂದ ಕೂಡಿದ ಉಪಹಾರವನ್ನು ಪ್ರಯತ್ನಿಸಿ. ಧಾನ್ಯಗಳಲ್ಲಿ ಕ್ಯಾಲ್ಶಿಯಂ ನಂತಹ ಪೋಷಕಾಂಶಗಳು ಹೇರಳವಾಗಿರುತ್ತದೆ. ನಿಮಗೆ ಆರೋಗ್ಯ ಸರಿಯಿಲ್ಲ ಎಂದು ಅನಿಸಿದರೆ ಎಲ್ಲಾ ಧಾನ್ಯಗಳ ಟೋಸ್ಟ್ ಅನ್ನು ತಿಂದು ನಂತರ ಇತರೆ ಉಪಹಾರವನ್ನು ಸೇವಿಸಿ.
 
*ಫೈಬರ್ ಪ್ರಮಾಣ ಹೆಚ್ಚಿರುವ ಆಹಾರವನ್ನು ಸೇವಿಸಬೇಕು:
 
ಬೇಯಿಸಿದ ಹಸಿರು ತರಕಾರಿಗಳು, ಬಾಳೆ ಹಣ್ಣುಗಳು, ಕ್ಯಾರೆಟ್, ವಿವಿಧ ತರಕಾರಿಗಳು ಮತ್ತು ಹಣ್ಣುಗಳಂತಹ ವಿವಿಧ ಆಹಾರಗಳನ್ನು ನಿಮ್ಮ ಮೆನುವಿನಲ್ಲಿ ಸೇರಿಸಿಕೊಳ್ಳಿ. ಸಾಕಷ್ಟು ಬೀನ್ಸ್, ಧಾನ್ಯಗಳು ಮತ್ತು ಕಂದು ಅಕ್ಕಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇವುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ನಿಮ್ಮ ಆರೋಗ್ಯಕ್ಕೆ ಪೂರಕವಾಗಿದೆ.
 
*ಆರೋಗ್ಯಕರವಾದ ತಿಂಡಿಗಳನ್ನು ಸೇವಿಸಬೇಕು:
 
ಹಣ್ಣುಗಳೊಂದಿಗೆ ಕಡಿಮೆ ಕೊಬ್ಬಿನ ಅಂಶವಿರುವ ಅಥವಾ ಕೊಬ್ಬಿನ ಅಂಶವಿಲ್ಲದ ಮೊಸರನ್ನು ಸೇವಿಸಿ. ಎಲ್ಲಾ ಧಾನ್ಯಗಳಿಂದ ಮಾಡಿದ ಕ್ರ್ಯಾಕರ್‌ಗಳು ಅಥವಾ ಕಡಿಮೆ ಕೊಬ್ಬಿನ ಅಂಶವಿರುವ ಚೀಸ್‌ ಅನ್ನು ಸಂಜೆಯ ಉಪಹಾರವಾಗಿ ಸೇವಿಸಬಹುದಾಗಿದೆ.
 
*ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವಿರುವ ಪ್ರಸವಪೂರ್ವ ವಿಟಮಿನ್ ಅನ್ನು ಸೇವಿಸಿ:
 ಕಬ್ಬಿಣಾಂಶವು ನಿಮ್ಮ ರಕ್ತವನ್ನು ಆರೋಗ್ಯವಾಗಿರಿಸುತ್ತದೆ. ಫೋಲಿಕ್ ಆಮ್ಲ ಜನ್ಮ ದೋಷಗಳನ್ನು ತಡೆಯುತ್ತದೆ.
 
*ಪ್ರತಿ ವಾರ ಸುಮಾರು 12 ಔನ್ಸ್ ಅಷ್ಟು ಮೀನು ಅಥವಾ ಚಿಪ್ಪು ಮೀನನ್ನು ಸೇವಿಸಿ:
 ಹೆಚ್ಚು ಪಾದರಸದ ಅಂಶವನ್ನು ಹೊಂದಿರುವ ಮೀನನ್ನು ಸೇವಿಸಬೇಡಿ. ಶಾರ್ಕ್, ಸ್ವಾರ್ಡ್‌ಫಿಶ್, ಕಿಂಗ್ ಮಾಕೆರೆಲ್ ಅಥವಾ ಟೆಲಿಫಿಶ್ ಸೇವಿಸುವುದನ್ನು ತಪ್ಪಿಸಿ. ಸೀಗಡಿ, ಸಾಲ್ಮನ್ ಮತ್ತು ಕ್ಯಾಟ್‌ಫಿಶ್‌ಗಳಲ್ಲಿ ಪಾದರಸದ ಅಂಶ ಕಡಿಮೆಯಿದ್ದು ಅದನ್ನು ಸೇವಿಸಬಹುದಾಗಿದೆ.
 
*ಸಾಫ್ಟ್ ಚೀಸ್ ಮತ್ತು ಲಂಚ್ ಮೀಟ್‌ನಿಂದ ಸಾಧ್ಯವಾದಷ್ಟು ದೂರವಿರಿ:
 
ಕೆಲವು ಆಹಾರಗಳು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರಬಹುದಾಗಿದ್ದು ಅವುಗಳು ನಿಮ್ಮ ದೇಹಕ್ಕೆ ಹಾನಿಯನ್ನು ಉಂಟುಮಾಡಬಹುದಾಗಿದೆ. ಫೆಟಾ, ಬ್ರೀ ಮತ್ತು ಕುರಿಯ ಚೀಸ್ ನಂತಹ ಸಾಫ್ಟ್ ಚೀಸ್ ಅನ್ನು ಸೇವಿಸಬೇಡಿ. ಉತ್ತಮವಾಗಿ ಬೇಯಿಸದ ಲಂಚ್ ಮೀಟ್ ಮತ್ತು ಹಾಟ್ ಡಾಗ್‌ಗಳಿಂದ ದೂರವಿರುವುದು ಉತ್ತಮ.
 
*ಕೆಫೇನ್ ಅನ್ನು ಮಿತಿಗೊಳಿಸಿ ಮತ್ತು ಮದ್ಯಪಾನದಿಂದ ದೂರವಿರಿ:
 
ಕೆಫೇನ್ ರಹಿತವಾದ ಟೀ ಅಥವಾ ಕಾಫಿಯನ್ನೇ ಸೇವಿಸಿ. ಸೋಡಾದ ಬದಲು ನೀರು ಅಥವಾ ಸೆಲ್ಟ್ಜರ್ ಕುಡಿಯಿರಿ. ಗರ್ಭವತಿಯರಾಗಿರುವ ಸಮಯದಲ್ಲಿ ಮದ್ಯವನ್ನು ಸೇವಿಸದಿರುವುದು ಬಹುಮುಖ್ಯವಾಗಿದೆ.
 
ಈ ಸಲಹೆಗಳನ್ನು ಉಪಯೋಗಿಸಿ ನೀವು ಗರ್ಭಿಣಿಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದನ್ನು ಅರಿತುಕೊಳ್ಳಬಹುದಾಗಿದೆ. ಆದರೆ ಹಲವರ ದೇಹ ಪ್ರಕೃತಿ ಬೇರೆ ಬೇರೆಯಾಗಿದ್ದು ಆಹಾರ ಪದ್ಧತಿಯೂ ಬೇರೆಯಾಗಿರುತ್ತದೆ. ಆದ್ದರಿಂದ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳ ಅನುಸಾರ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮವಾಗಿದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ಸೇವಿಸಿ: ಅಚ್ಚರಿ ಬದಲಾವಣೆ ಕಾಣುತ್ತೀರಿ

ಬೆಳ್ಳುಳ್ಳಿಯನ್ನು ತಿನ್ನುವ ಸರಿಯಾದ ಕ್ರಮ ಹೀಗಿರಲಿ

ಸಿಹಿ ಕುಂಬಳಕಾಯಿ ಬಳಸಿ ಫೇಸ್ ಪ್ಯಾಕ್ ತಯಾರಿಸಿ

ತೂಕ ಕಡಿಮೆಯಾಗಬೇಕಾದರೆ ಈ ಯೋಗ ಮಾಡಿ

ಹಲ್ಲಿನ ವಸಡಿನಲ್ಲಿ ರಕ್ತ ಬರಲು ಕಾರಣಗಳು

ಮುಂದಿನ ಸುದ್ದಿ
Show comments