Select Your Language

Notifications

webdunia
webdunia
webdunia
webdunia

ಒಡೆದ ತೆಂಗಿನಕಾಯಿ 3-4 ದಿನಗಳವರೆಗೆ ಹಾಳಾಗದಂತೆ ಇಡಲು ಹೀಗೆ ಮಾಡಿ

ಒಡೆದ ತೆಂಗಿನಕಾಯಿ 3-4 ದಿನಗಳವರೆಗೆ ಹಾಳಾಗದಂತೆ ಇಡಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 3 ಆಗಸ್ಟ್ 2018 (07:07 IST)
ಬೆಂಗಳೂರು : ಹೆಚ್ಚಿನವರು ಸಾಂಬಾರು ಪದಾರ್ಥಗಳನ್ನು ಮಾಡಲು ತೆಂಗಿನಕಾಯಿಯನ್ನು ಬಳಸುತ್ತಾರೆ. ಹೀಗೆ ಬಳಸಿದ ತೆಂಗಿನಕಾಯಿ ಉಳಿದರೆ ಅದು ಹಾಳಾಗಬಾರದೆಂದು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಮನೆಯಲ್ಲಿ ಫ್ರಿಡ್ಜ್ ಇಲ್ಲದವರು ಕೂಡ ಒಡೆದ ತೆಂಗಿನಕಾಯಿಯನ್ನು 3-4 ದಿನ ಹಾಳಾಗದಂತೆ ಇಡಬಹುದು. ಅದು ಹೀಗೆ ಎಂಬುದು ಇಲ್ಲಿದೆ ನೊಡಿ.


ಒಂದು ಪಾತ್ರೆಯಲ್ಲಿ  ತೆಂಗಿನಕಾಯಿ ಮುಳುಗುವಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಉಪ್ಪು ಕರಗಿದ ನಂತರ ಆ ನೀರಿನಲ್ಲಿ ಒಡೆದ ತೆಂಗಿನಕಾಯಿ ಭಾಗಗಳನ್ನು ಮುಳುಗಿಸಿ ಇಡಬೇಕು. ಪ್ರತಿದಿನ ಈ ನೀರನ್ನು ಬದಲಾಯಿಸುತ್ತಾ ಇರಬೇಕು. ಹೀಗೆ ಮಾಡಿದ್ರೆ 3-4 ದಿನ ಅದು ಹಾಳಾಗದೆ ಹಾಗೇ ಇರುತ್ತದೆ.  ಆದರೆ ಆ ತೆಂಗಿನಕಾಯಿ ಬಳಸುವಾಗ ಚೆನ್ನಾಗಿ ಬೇರೆ ನೀರಿನಿಂದ ತೊಳೆದುಕೊಳ್ಳುವುದನ್ನು ಮರೆಯಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುವರ್ಣಗಡ್ಡೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭವಿದೆ ಎಂದರೆ ನೀವು ನಂಬಲೇಬೇಕು!