ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಅದರ ಮಾತ್ರೆ ಸೇವಿಸಿದ ತಕ್ಷಣ ಹೀಗೆ ಮಾಡಿ!

ಗುರುವಾರ, 8 ನವೆಂಬರ್ 2018 (07:51 IST)
ಬೆಂಗಳೂರು: ಅಧಿಕ ರಕ್ತದೊತ್ತಡ ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದನ್ನು ದೂರ ಮಾಡುವುದಕ್ಕೆ ಒಂದು ಉಪಾಯವಿದೆ.
 

ಅಧಿಕ ರಕ್ತದೊತ್ತಡ ಅಥವಾ ಬಿಪಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಈ ಒಂದು ಕೆಲಸ ಮಾಡಿದರೆ ಸಾಕು. ನಿಮ್ಮ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಬ್ರೆಜಿಲ್ ನ ಅಧ್ಯಯನಕಾರರು ನಡೆಸಿ ಸಂಶೋಧನೆಯಿಂದ ತಿಳಿದುಬಂದಿರುವುದೇನೆಂದರೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಮಾತ್ರೆ ಸೇವಿಸುತ್ತಿದ್ದರೆ, ಇದನ್ನು ಸೇವಿಸಿದ ತಕ್ಷಣ ಕನಿಷ್ಠ ಒಂದು ಗಂಟೆ ಕಾಲ ಶಾಸ್ತ್ರೀಯ ಸಂಗೀತ ಅಥವಾ ಇನ್ಯಾವುದೇ ಮನಸ್ಸಿಗೆ ಮುದ ನೀಡುವ ಸಂಗೀತ ಆಲಿಸಬೇಕಂತೆ. ಇದರಿಂದ ರಕ್ತದೊತ್ತಡಕ್ಕೆ ಕಾರಣವಾಗುವ ಅಂಶ ಕಡಿಮೆಯಾಗುವುದಲ್ಲದೆ, ನಮ್ಮ ಹೃದಯ ಬಡಿತವೂ ಸಹಜ ಸ್ಥಿತಿಯಲ್ಲಿರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING