Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ನಿಜವಾಗಿಯೂ ಮೊಬೈಲ್ ಬಳಸುವುದು ಹಾನಿಕಾರಕವೇ?!

ಗರ್ಭಿಣಿಯರು ನಿಜವಾಗಿಯೂ ಮೊಬೈಲ್ ಬಳಸುವುದು ಹಾನಿಕಾರಕವೇ?!
ಬೆಂಗಳೂರು , ಬುಧವಾರ, 6 ಸೆಪ್ಟಂಬರ್ 2017 (08:58 IST)
ಬೆಂಗಳೂರು: ಗರ್ಭಿಣಿ ಮಹಿಳೆಯರು ಮೊಬೈಲ್ ಫೋನ್ ಬಳಸಬಾರದು. ಮೊಬೈಲ್ ಬಳಕೆ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದೆಲ್ಲಾ ನಾವು ಕೇಳಿದ್ದೇವೆ.

 
ಮೊಬೈಲ್ ಹೊರ ಸೂಸುವ ತರಂಗಗಳು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ ಎಂದು ಇದುವರೆಗೆ ಹೊರಬಂದ ಹಲವು ಸಂಶೋಧನೆಗಳು ಹೇಳಿವೆ.

ಆದರೆ ಹೊಸ ಸಂಶೋಧನೆಯೊಂದನ್ನು ಇದೆಲ್ಲವನ್ನೂ ಅಲ್ಲಗಳೆದಿದೆ. ಮೊಬೈಲ್ ಬಳಕೆ ಮಾಡುವುದರಿಂದ ಹುಟ್ಟುವ ಮಗುವಿನ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಬಹುದು ಎಂದು ಹೊಸ ಅಧ್ಯಯನವೊಂದು ಪ್ರತಿಪಾದಿಸಿದೆ.

ಮೊಬೈಲ್ ಬಳಸದ ತಾಯಂದಿರಿಗೆ ಹೋಲಿಸಿದರೆ ಮೊಬೈಲ್ ಬಳಸಿದ ತಾಯಂದಿರ ಮಕ್ಕಳಲ್ಲಿ ಭಾಷಾ ಜ್ಞಾನ, ಸಂವಹನ ಸ್ಪಷ್ಟತೆ, ವ್ಯಾಕರಣ ಸ್ಪುಟತೆ ಎಲ್ಲವೂ  ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. ಮೊಬೈಲ್ ಸೂಸುವ ತರಂಗಾಂತರಗಳು ಮಗುವಿನ ನ್ಯೂರೋ ಡೆವಲಪ್ ಮೆಂಟ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ. ಒಟ್ಟು 45389 ಗರ್ಭಿಣಿ ಮಹಿಳೆಯರ ಮೇಲೆ ಈ ಪ್ರಯೋಗ ನಡೆಸಲಾಗಿತ್ತು.

ಇದನ್ನೂ ಓದಿ.. ಟೀಂ ಇಂಡಿಯಾದ 2018 ರ ಪ್ರೋಗ್ರಾಂ ಫಿಕ್ಸ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಗಲಕಾಯಿ ಜ್ಯೂಸ್ ಕುಡಿದು ಮ್ಯಾಜಿಕ್ ನೋಡಿ!