Select Your Language

Notifications

webdunia
webdunia
webdunia
webdunia

ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸುತ್ತಿದ್ದರೆ ಅಪಾಯ ಖಂಡಿತವಂತೆ

ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸುತ್ತಿದ್ದರೆ  ಅಪಾಯ ಖಂಡಿತವಂತೆ
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (10:25 IST)
ಬೆಂಗಳೂರು : ಸಾಮಾನ್ಯವಾಗಿ ಜನರಿಗೆ ತಾವು ಕೂತಲ್ಲೇ ಆಗಾಗ್ಗೆ ತಮ್ಮ ಕಿವಿ, ಕಣ್ಣು, ಮೂಗು ಮೊದಲಾದ ಅಂಗಗಳನ್ನು ಮುಟ್ಟಿಕೊಳ್ಳೋದು ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಆದರೆ ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸಬಾರದಂತೆ.  ಆ ಅಂಗಗಳನ್ನು ಆಗಾಗ್ಗೆ ಮುಟ್ಟಿಕೊಳ್ಳುವುರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆಯಂತೆ


ಹಾಗಾದ್ರೆ ದೇಹದ ಆ 6 ಪ್ರಮುಖ ಅಂಗಗಳು ಯಾವುವು ಮತ್ತು ಅವುಗಳನ್ನು ಆಗಾಗ್ಗೆ ಸ್ಪರ್ಶಿಸುವುದರಿಂದ ಆಗುವ ದುಷ್ಪರಿಣಾಮಗಳೇನು ಎಂಬುದು ಇಲ್ಲಿದೆ ನೋಡಿ

*ಕಣ್ಣುಗಳನ್ನು ಉಜ್ಜಬೇಡಿ : ನಾವು ನಮ್ಮ ಕಣ್ಣುಗಳಿಗೆ ನೋವಾದಾಗಲೋ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಕಣ್ಣುಗಳನ್ನು ಉಜ್ಜುತ್ತೇವೆ. ಹೀಗೆ ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳುತ್ತಿದ್ದರೆ ನಿಮ್ಮ ಬೆರಳುಗಳು ಮತ್ತು ಉಗುರುಗಳಲ್ಲಿನ ಕೊಳೆ ಅವುಗಳಿಗೆ ಸೇರಿ ಸುಲಭವಾಗಿ ಸೋಂಕು ಹರಡುತ್ತದೆ. ಇದರಿಂದ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

*ಮುಖವನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ : ಕೆಲವರು ತಮ್ಮ ಮುಖ ಎಣ್ಣೆ ತ್ವಚೆಯಿಂದ ಕೂಡಿದೆ ಎಂಬ ಕಾರಣಕ್ಕೆ ಪದೇ ಪದೇ ತಮ್ಮ ಕೈಗಳಿಂದ ಒರೆಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮುಖದ ಮೇಲೆ ಮೊಡವೆಗಳಿದ್ದರೆ ಅದು ಮತ್ತಷ್ಟು ಹರಡುತ್ತದೆ.

*ಕಿವಿ ಒಳಗೆ ಬೆರಳು ಹಾಕಬೇಡಿ : ಸಾಮಾನ್ಯವಾಗಿ ಜನರು ತಮ್ಮ ಕಿವಿಗಳನ್ನು ಬೆರಳುಗಳಿಂದ, ತಮ್ಮ ಬೈಕ್ ಕೀ ಅಥವಾ ಹೇರ್ಪಿನ್ ಮತ್ತಿತರ ವಸ್ತುಗಳಿಂದ ಕಿವಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ, ಇದು ತುಂಬಾ ಅಪಾಯಕಾರಿ. ಹೀಗೆ ಮಾಡುವಾಗ ಕಿವಿಯೊಳಗೆ ಸ್ವಲ್ಪ ನೋವಾದರೂ ಸಾಕು, ಗಾಯವಾಗಿ ನೋವು ಅನುಭವಿಸಬೇಕಾಗುತ್ತದೆ.

*ಮೂಗಿನೊಳಗೆ ಬೆರಳು ಹಾಕಬೇಡಿ : ಕೆಲವರು ಮೂಗಿನೊಳಗಿನ ಕೊಳೆ ತೆಗೆಯಲು ಬೆರಳು ಹಾಕಿ ತಿರುವುತ್ತಾರೆ. ಹೀಗೆ ಮಾಡುವಾಗ ಕೈಬೆರಳಿನ ಉಗುರಿನಲ್ಲಿಸುವ ಕೊಳೆ ಮೂಗನ್ನು ಸೇರಿ ಬೇಗ ಸೋಂಕು ಹರಡುವ ಸಾಧ್ಯತೆ ಇದೆ.

*ಗುದ(Anal)ವನ್ನು ಮುಟ್ಟಿಕೊಳ್ಳಬೇಡಿ : ಗುದದಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಮುಟ್ಟುವುದರಿಂದ ಈ ಭಾಗದಲ್ಲಿನ ಬ್ಯಾಕ್ಟೀರಿಯಾಗಳು ಕೈಗೆ ಅಂಟಿಕೊಳ್ಳುತ್ತವೆ. ಹೀಗೆ ಬ್ಯಾಕ್ಟೀರಿಯಾಯುಕ್ತ ಕೈಯಿಂದ ದೇಹದ ಇತರ ಅಂಗಗಳನ್ನು ಸ್ಪರ್ಶಿಸುವುದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗುತ್ತದೆ.

*ಬಾಯಿಗೆ ಪದೇ ಪದೆ ಕೈ ಹಾಕಬೇಡಿ : ನೀವು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದಿದ್ದರೂ ಸಹ, ನಿಮ್ಮ ಕೈಯಲ್ಲಿರುವ ಬ್ಯಾಕ್ಟೀರಿಯ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಹೀಗಾಗಿ ನೀವು ಬಾಯಿಗೆ ಪದೇ ಪದೇ ಬೆರಳು ಹಾಕುವುದು ಅಥವಾ ಮುಟ್ಟಿಕೊಳ್ಳುವುದನ್ನು ಮಾಡುತ್ತಿದ್ದರೆ ಎಲ್ಲಾ ಬ್ಯಾಕ್ಟೀರಿಯಾಗಳು ಬಾಯಿಯೊಳಗೆ ಹೋಗಿ ಬೇಗ ಆರೋಗ್ಯ ಹದಗೆಡುತ್ತದೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರೆ ಹೀಗೆ ಮಾಡಿ!