ಕಣ್ಣಿನಲ್ಲಿ ಪದೇ ಪದೇ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ ಸಮಸ್ಯೆಯನ್ನು ದೂರಮಾಡಿಕೊಳ್ಳಿ

ಶುಕ್ರವಾರ, 8 ಫೆಬ್ರವರಿ 2019 (06:43 IST)
ಬೆಂಗಳೂರು : ಹೆಚ್ಚಿನವರಿಗೆ ಯಾವುದಾದರೂ ವಸ್ತುವನ್ನು ನೋಡುವಾಗ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಪದೇ ಪದೇ ಕಣ್ಣಿನಲ್ಲಿ ಚುಚ್ಚಿದಂತಾಗುತ್ತದೆ, ಕಣ್ಣು ಉರಿಯುತ್ತದೆ. ಇಂತಹ ಸಮಸ್ಯೆಗಳಿರುವವರು ಈ ಮನೆಮದ್ದನ್ನು ಬಳಸಿ ನಿಮ್ಮ ಕಣ್ಣಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.


1 ಈರುಳ್ಳಿ ತೆಗೆದುಕೊಂಡು ಅದಕ್ಕೆ ನೀರು ಹಾಕದೇ ಪೇಸ್ಟ್ ಮಾಡಿಕೊ‍ಳ್ಳಿ. ಅದನ್ನು ಬಟ್ಟೆಯಲ್ಲಿ ಸೋಸಿ. ಇದರಿಂದ ರಸ ಸಿಗುತ್ತೆ. ಅದನ್ನು ಕ್ಲೀನ್ ಆಗಿರುವ ಹತ್ತಿ ಉಂಡೆಯಿಂದ ತೆಗೆದುಕೊಂಡು 2 ಕಣ್ಣಿಗೆ ಒಂದೊಂದು ಹನಿ ಹಾಕಬೇಕು. ಹೀಗೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮಾಡಿದರೆ ನಿಮ್ಮ ಕಣ್ಣಿನ ಸಮಸ್ಯೆ ದೂರವಾಗುತ್ತದೆ.


ಜೊತೆಗೆ ಈರುಳ್ಳಿಯನ್ನು ಬೆಳಿಗ್ಗೆ ಹಾಗೂ ಸಂಜೆ ಊಟದ ಜೊತೆ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕಣ್ಣಿನ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING