Select Your Language

Notifications

webdunia
webdunia
webdunia
webdunia

ಸಕ್ಕರೆ ಖಾಯಿಲೆ ಇದೆಯೇ ಎಂದು ಪತ್ತೆ ಹಚ್ಚುವುದು ಹೇಗೆ?

ಸಕ್ಕರೆ ಖಾಯಿಲೆ ಇದೆಯೇ ಎಂದು ಪತ್ತೆ ಹಚ್ಚುವುದು ಹೇಗೆ?
Bangalore , ಭಾನುವಾರ, 23 ಏಪ್ರಿಲ್ 2017 (07:16 IST)
ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಮನುಷ್ಯನಿಗೆ ವಯೋ ಸಹಜ ಖಾಯಿಲೆಗಳು ಬರುವುದು ಸಹಜ. ಅದರಲ್ಲಿ ಸಕ್ಕರೆ ಖಾಯಿಲೆಯೂ ಒಂದು. ಒಬ್ಬ ವ್ಯಕ್ತಿಗೆ ಸಕ್ಕರೆ ಖಾಯಿಲೆ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ಒಂದು ಸುಲಭ ಉಪಾಯ.

 
ಅಧಿಕ ಮೂತ್ರ ಮತ್ತು ಬಾಯಾರಿಕೆ: ಆಗಾಗ ಮೂತ್ರಿಸಬೇಕೆಂದೆನಿಸುವುದು ಮತ್ತು ವಿಪರೀತ ಬಾಯಾರಿಕೆ ಇದರ ಪ್ರಧಾನ ಲಕ್ಷಣಗಳಲ್ಲೊಂದು.

ತೂಕ ಕಳೆದುಕೊಳ್ಳುವುದು: ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು. ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ ಅಂಶ ತೂಕ ಕಳೆದುಕೊಳ್ಳುವಂತೆ ಮಾಡುವುದು.

ಹಸಿವು: ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದರಿಂದ ವಿಪರೀತ ಹಸಿವಾದ ಅನುಭವವಾಗುತ್ತದೆ.

ಚರ್ಮದ ಸಮಸ್ಯೆ: ಒಣಗಿದ ಚರ್ಮ ಅಥವಾ ತುರಿಕೆ ಇದ್ದರೆ, ಅದು ಮಧುಮೇಹದ ಲಕ್ಷಣವೇ.

ಗಾಯಗಳು: ಶರೀರದ ಯಾವುದೇ ಭಾಗದಲ್ಲಾದರೂ, ಸಣ್ಣ ಗಾಯವಾದರೂ, ಬೇಗನೇ ಗುಣವಾಗದೇ ವಾರಗಟ್ಟಲೆ ಕೀವು ತುಂಬಿದಂತಿರುವುದು.

ಸುಸ್ತು: ಮಧುಮೇಹ ಅಂಟಿಕೊಂಡರೆ ಬೇಗನೇ ಸುಸ್ತಾಗುತ್ತೀರಿ. ಅಲ್ಲದೆ ಬೇಗನೇ ಸಿಟ್ಟಿಗೇಳುತ್ತೀರಿ.

ಮಂದ ದೃಷ್ಟಿ: ಕಣ್ಣಿನ ಭಾಗದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುವುದರಿಂದ ಆರಂಭದ ಹಂತದಲ್ಲಿ ಮಂದ ದೃಷ್ಟಿ ಸಮಸ್ಯೆ ಕಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಿಗ್ಗೆ ಟೀ ಕುಡಿಯುವುದು ಎಷ್ಟು ಡೇಂಜರಸ್ ಗೊತ್ತಾ?!