ಮೊದಲ ರಾತ್ರಿ ರೊಮ್ಯಾನ್ಸ್ ಬಗ್ಗೆ ಭಯವೇ? ಹಾಗಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!

ಬುಧವಾರ, 4 ಜುಲೈ 2018 (09:22 IST)
ಬೆಂಗಳೂರು: ಮದುವೆಯ ಮೊದಲ ದಿನ ಹೇಗೋ ಏನೋ ಎಂಬ ಆತಂಕ ಇದ್ದೇ ಇರುತ್ತದೆ. ಮೊದಲ ರಾತ್ರಿಯೇ ಸಂಗಾತಿ ಜತೆಗೆ ಲೈಂಗಿಕ ವಿಚಾರದಲ್ಲಿ ಹೇಗಿರಬೇಕು ಎಂಬ ಆತಂಕವಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!

ಮೊದಲೇ ಮಾತಾಡಿ
ಮದುವೆಗೆ ಮೊದಲೇ ಲೈಂಗಿಕ ಜೀವನದ ಬಗ್ಗೆ ಪರಸ್ಪರ ಮಾತಾಡಿಕೊಂಡು ನಿಮ್ಮೊಳಗಿರುವ ಆತಂಕ, ಅನುಮಾನಗಳನ್ನು ಪರಿಹರಿಸಿಕೊಳ್ಳುವುದು. ಮದುವೆಗೆ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ, ನಿಮ್ಮಿಬ್ಬರ ಲೈಂಗಿಕ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸಿಕೊಂಡರೆ ಮೊದಲ ರಾತ್ರಿ ಭಯಪಡುವ ಅಗತ್ಯವಿರಲ್ಲ.

ಎರಡನೇ ಆಯ್ಕೆ ಏನು ಗೊತ್ತಾ?
ಕೆಲವರಿಗೆ ಮದುವೆಗೆ ಮೊದಲೇ ಲೈಂಗಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಲು ಸಂಕೋಚ ಅಡ್ಡಿಬರಬಹುದು. ಅಂತಹ ಸಂದರ್ಭದಲ್ಲಿ ಮೊದಲ ರಾತ್ರಿ ದಿನವಾದರೂ ಮುಕ್ತವಾಗಿ ಮಾತನಾಡಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಲೇಬೇಕು. ಸಂಗಾತಿ ಬಳಿ ಲೈಂಗಿಕ ಜೀವನ ನಡೆಸಲು ಸ್ವಲ್ಪ ಸಮಯ ಕೇಳಿ. ಮೊದಲು ಸ್ನೇಹಿತರಾಗಿ, ನಂತರ ರೊಮ್ಯಾನ್ಸ್ ಇದ್ದೇ ಇರುತ್ತದೆ. ಇದರಿಂದ ದಾಂಪತ್ಯ ಜೀವನವೂ ಖುಷಿಯಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING