Select Your Language

Notifications

webdunia
webdunia
webdunia
webdunia

ಗಂಟಲ ಕಿರಿಕಿರಿಯಿಂದ ಮಾತನಾಡಲು ಕಷ್ಟವಾಗುತ್ತಿದ್ದರೆ ಹೀಗೆ ಮಾಡಿ

ಗಂಟಲ ಕಿರಿಕಿರಿಯಿಂದ ಮಾತನಾಡಲು ಕಷ್ಟವಾಗುತ್ತಿದ್ದರೆ ಹೀಗೆ ಮಾಡಿ
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (08:08 IST)
ಬೆಂಗಳೂರು : ಕೆಲವೊಮ್ಮೆ ಧೂಳು ಇದ್ದ ಕಡೆ ಹೋದಾಗ ಗಂಟಲಿನಲ್ಲಿ ಕಿರಿಕಿರಿ ಗಂಟಲಿನ ಸಮಸ್ಯೆ ಹೆಚ್ಚಾಗಿ ಬರುತ್ತದೆ. ಇದರಿಂದ ಮಾತನಾಡಲು ಕಷ್ಟವಾಗುತ್ತದೆ. ಈ ಗಂಟಲ ಸಮಸ್ಯೆಯನ್ನು ಹೋಗಲಾಡಿಸಲು ಹೀಗೆ ಮಾಡಿ.


ಬಿಸಿನೀರಿಗೆ ಸ್ವಲ್ಪ ಹಸಿಶುಂಠಿಯನ್ನು ಹಾಕಿ ಕುದಿಸಿ ಸೋಸಿ. ಈ ಟೀಯನ್ನು ದಿನಕ್ಕೆರಡು ಕಪ್‌ನಂತೆ ಕುಡಿಯಿರಿ. ಗಂಟಲ ಬೇನೆಗೆ ತಕ್ಷ ಣದ ಪರಿಹಾರ ನೀಡಲು ಈ ವಿಧಾನ ಉತ್ತಮವಾಗಿದೆ. ಒಂದು ವೇಳೆ ಕಫ ಗಟ್ಟಿಯಾಗಿದ್ದಂತೆ ಅನ್ನಿಸಿದರೆ ಈ ಟೀ ಯಲ್ಲಿ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ


ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವು ನಿವಾರಣೆ ಇದು ಉತ್ತಮ.


ಒಂದು ಲೀಟರ್‌ ನೀರಿಗೆ 2 ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಗಂಟಲಿನಲ್ಲಿ ಗಳಗಳ ಮಾಡಿ ಮುಕ್ಕಳಿಸುತ್ತಿರಿ. ಹೀಗೆ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ವೈರಲ್ ಫಿವರ್ ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ