ಸೈನಸ್ ತಲೆನೋವೇ? ಹಾಗಿದ್ದರೆ ಸ್ಟೀಮ್ ತೆಗೆದುಕೊಳ್ಳುವುದು ಬಿಟ್ಟು ಹೀಗೆ ಮಾಡಿ!

ಶುಕ್ರವಾರ, 30 ನವೆಂಬರ್ 2018 (09:09 IST)
ಬೆಂಗಳೂರು: ಸೈನಸ್ ತಲೆನೋವಿಗೆ ಸ್ಟೀಮ್ ಮಾಡಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟ್ರಿಕ್ಸ್ ಮಾಡಿ ನೋಡಿ.


ಇಷ್ಟದ ಹಾಡು ಹಾಡಿ
ಹೌದು! ಸೈನಸ್ ತಲೆನೋವಾಗುತ್ತಿರುವಾಗ ಬಾಯಿ ತೆರೆದು, ಗಂಟಲುಗಳಿಗೆ ಚೆನ್ನಾಗಿ ವ್ಯಾಯಾಮ ಸಿಗುವಂತಹ ಹಾಡು ಹಾಡಿ. ಇದರಿಂದ ವಾಯು ನಾಳದಲ್ಲಿ ಚೆನ್ನಾಗಿ ವಾಯು ಸಂಚಾರವಾಗಿ ತಡೆ ರಹಿತವಾಗುತ್ತದೆ.

ಚಕ್ಕೆ
ವಿಪರೀತ ತಲೆನೋಯುತ್ತಿದ್ದಾಗ ಸ್ವಲ್ಪ ಚಕ್ಕೆ ಪುಡಿ ಮತ್ತು ಜೇನು ತುಪ್ಪ ಮಿಕ್ಸ್ ಮಾಡಿ ಬಿಸಿ ನೀರಿಗೆ ಹಾಕಿಕೊಂಡು ಸೇವಿಸಿ. ಒಂದು ವೇಳೆ ಈ ಟೇಸ್ಟ್ ನಿಮಗೆ ಇಷ್ಟವಾಗುತ್ತಿಲ್ಲ ಎಂದಾದರೆ ನೀರು ಬೆರೆಸದೇ ಈ ಪೇಸ್ಟ್ ನ್ನು ಹಣೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಡಿ.

ಮೆಣಸು ತಿನ್ನಿ!
ಮೆಣಸು ಮುಂತಾದ ಖಾರದ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಗಂಟಲು ಚೆನ್ನಾಗಿ ತೆರೆದುಕೊಳ್ಳುತ್ತವೆ. ಖಾರದ ವಸ್ತು ತಿಂದ ಕೂಡಲೇ ನಿಮಗೆ ಕಣ್ಣು ಮೂಗಿನಲ್ಲಿ ನೀರು ಬಂದೇ ಬರುತ್ತದಲ್ಲವೇ? ಹೀಗೇ ಮೂಗಿನಲ್ಲಿ ಗಟ್ಟಿಯಾಗಿ ಸೇರಿಕೊಂಡಿರುವ ಕಫ ಕರಗಿ ಸೈನಸ್ ನೋವು ಕಡಿಮೆಯಾಗಲು ಸಹಕರಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮತ್ತೆ ಮತ್ತೆ ಕಾಡುವ ನೆನಪುಗಳು!