Select Your Language

Notifications

webdunia
webdunia
webdunia
webdunia

ಸ್ಟ್ರೇಚ್ ಮಾರ್ಕ್ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

ಸ್ಟ್ರೇಚ್ ಮಾರ್ಕ್ ಹೋಗಲಾಡಿಸಲು ಇಲ್ಲಿದೆ ಮನೆಮದ್ದು
ಬೆಂಗಳೂರು , ಬುಧವಾರ, 2 ಜನವರಿ 2019 (07:18 IST)
ಬೆಂಗಳೂರು : ಹೆರಿಗೆ ನಂತರ ಮಹಿಳೆಯರ ಹೊಟ್ಟೆಯಲ್ಲಿ ಸ್ಟ್ರೇಚ್ ಮಾರ್ಕ್ ಮೂಡುತ್ತದೆ. ಇದು ಮಹಿಳೆಯರ ಹೊಟ್ಟೆಯ ಅಂದವನ್ನೇ ಕೆಡಿಸುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು. ಅದು ಹೇಗೆಂಬುದನ್ನು ತಿಳಿಯೋಣ.


ಶುದ್ಧ ಗಂಧದ ಪುಡಿ ½ ಟೀ ಚಮಚ ಹಾಗೂ ಲವಂಚ ಪುಡಿ ½ ಟೀ ಚಮಚ, ಇವೆರಡನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಸ್ಟ್ರೇಚ್ ಮಾರ್ಕ್ ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಪ್ರತಿದಿನ 2 ಬಾರಿ ಮಾಡಿ. ಹೀಗೆ 2-3 ತಿಂಗಳು ಮಾಡಿದರೆ ಸ್ಟ್ರೇಚ್ ಮಾರ್ಕ್ ಕಡಿಮೆಯಾಗುತ್ತದೆ.


ಆಲೀವ್ ಆಯಿಲ್ ¼ ಟೀ ಚಮಚ, ಲಾವೆಂಡರ್ ಆಯಿಲ್ 4 ಹನಿ, ಕೊಬ್ಬರಿ ಎಣ್ಣೆ ¼ ಟೀ ಚಮಚ, ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದರಲ್ಲಿ ಸ್ವಲ್ಪ ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿಕೊಂಡು ಸ್ಟ್ರೇಚ್ ಮಾರ್ಕ್ ಇರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಕೂಡ  ಪ್ರತಿದಿನ 2 ಬಾರಿ ಮಾಡಿ. ಹೀಗೆ 2-3 ತಿಂಗಳು ಮಾಡಿದರೆ ಸ್ಟ್ರೇಚ್ ಮಾರ್ಕ್ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿಯಲ್ಲಿರುವ ಕಲ್ಲನ್ನು 3 ದಿನದಲ್ಲಿ ಕರಗಿಸುತ್ತದೆ ಈ ಕಷಾಯ