Select Your Language

Notifications

webdunia
webdunia
webdunia
webdunia

ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಹೀಗೂ ಆಗುತ್ತದೆ!

ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಹೀಗೂ ಆಗುತ್ತದೆ!
Bangalore , ಶುಕ್ರವಾರ, 7 ಜುಲೈ 2017 (10:09 IST)
ಬೆಂಗಳೂರು: ಪ್ರತಿನಿತ್ಯ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಸಾಧಾರಣವಾಗಿ ನಮಗೆಲ್ಲಾ ಇರುತ್ತದೆ. ಆದರೆ ಆ ಹಾಲಿಗೆ ಕೊಂಚ  ಅರಸಿನ ಹುಡಿ ಹಾಕಿ ಕುಡಿದು ನೋಡಿ. ಹಲವು ರೋಗಗಳಿಗೆ ಇದುವೇ ಮದ್ದು.

 
ಅರಸಿನ ವಿಷಕಾರಿ ಅಂಶವನ್ನು ತೆಗೆಯುವ ಗುಣ ಹೊಂದಿದೆ. ಹಾಗೆಯೇ ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.  ಹಾಲಿಗೆ ಅರಸಿನ ಪುಡಿ ಹಾಕಿ ಕುಡಿಯುವುದರಿಂದ ನಿಮಗೆ ಬೇಗನೇ ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟಬಹುದು!

ಇನ್ನು ಯಾವುದಾದರೂ, ಗಾಯಗಳು, ಹುಣ್ಣುಗಳಿದ್ದರೆ ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಬೇಗನೇ ಗುಣವಾಗುತ್ತದೆ. ಇದರಲ್ಲಿ ಹುಣ್ಣುಗಳು ಕೀವಾಗದಂತೆ ತಡೆಗಟ್ಟುವ ಗುಣವಿದೆ. ಅಲ್ಲದೆ ಕೀಲು, ಸಂಧು ನೋವುಗಳು, ಮೈ ಕೈನೋವು ಇದ್ದರೆ ಅರಸಿನ ರಾಮಬಾಣ.  ಅಲ್ಲದೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.

ಹಾಗೆಯೇ ಚರ್ಮದ ಅಲರ್ಜಿ, ಚರ್ಮ ಸಂಬಂಧೀ ಇತರ ಖಾಯಿಲೆಗಳು ಇದ್ದಲ್ಲಿ ಅರಸಿನ ಬಹಳ ಉಪಕಾರಿ. ಹಾಗಾಗಿ ಪ್ರತಿನಿತ್ಯ ಹಾಲು ಕುಡಿಯುವಾಗ ಒಂದು ಚಿಟಿಕಿ ಅರಸಿನ ಪುಡಿ ಹಾಕಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಮಾಡಿ ಸವಿಯಿರಿ ಎಗ್ ಲೆಸ್ ಕೇಕ್