Select Your Language

Notifications

webdunia
webdunia
webdunia
webdunia

ಅಲ್ಯುವಿರಾ ಜ್ಯೂಸ್ ಕುಡಿಯುವುದರ ಲಾಭವೇನು ಗೊತ್ತಾ?!

ಅಲ್ಯುವಿರಾ ಜ್ಯೂಸ್ ಕುಡಿಯುವುದರ ಲಾಭವೇನು ಗೊತ್ತಾ?!
Bangalore , ಮಂಗಳವಾರ, 4 ಏಪ್ರಿಲ್ 2017 (09:46 IST)
ಬೆಂಗಳೂರು: ಅಲ್ಯುವಿರಾ ಆಯುರ್ವೇದಿಕ್ ಪದ್ಧತಿಯಲ್ಲಿ ಬಹುಪಯೋಗಿ ಸಸ್ಯ ಸಂಪತ್ತು. ಇದರ ಆರೋಗ್ಯಕರ ಉಪಯೋಗಗಳು ಅನೇಕ. ಇದರ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಾಗುತ್ತದೆ ಗೊತ್ತಾ?

 

ಪೋಷಕಾಂಶಗಳು

ಅಲ್ಯುವಿರಾದಲ್ಲಿ ವಿಟಮಿನ್ ಗಳ ಆಗರವೇ ಇದೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಡಿ ಹೇರಳವಾಗಿದ್ದು, ನಮ್ಮ ದೇಹಕ್ಕೆ ಇದು ಅತೀ ಅಗತ್ಯವಾಗಿದೆ.

 
ಜೀರ್ಣಕ್ರಿಯೆ

ಪ್ರತೀದಿನ ಅಲ್ಯುವಿರಾ ಜ್ಯೂಸ್ ಕುಡಿಯುತ್ತಿದ್ದರೆ, ಅಸಿಡಿಟಿ,  ಮಲಬದ್ಧತೆ ಮುಂತಾದ ಜೀರ್ಣಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. ಅಲ್ಲದೆ ತೂಕ ಕಳೆದುಕೊಳ್ಳಲು ಬಯಸುವವರಿಗೂ ಇದು ರಾಮಬಾಣ.

 
ವಿಷ ಹೊರಗೆಳೆಯುತ್ತದೆ

 
ದೇಹದಲ್ಲಿ ಸೇರಿಕೊಂಡ ವಿಷಕಾರಿ ಅಂಶವನ್ನು ಹೊರಗೆಳೆಯುವ ಗುಣ ಅಲ್ಯುವಿರಾ ಜ್ಯೂಸ್ ಗಿದೆ. ಇದರಿಂದ ಉದರ ಕ್ಲೀನ್ ಆಗುವುದಲ್ಲದೆ, ಕಫದಂತಹ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು.

 
ಹಾರ್ಮೋನ್ ಸಮಸ್ಯೆಗೆ

 
ನಿಮಗೆ ಗೊತ್ತಾ? ಅಲ್ಯುವಿರಾದಲ್ಲಿ ಹಾರ್ಮೋನ್ ನಿಯಂತ್ರಿಸುವ ಗುಣವಿದೆ. ಪ್ಯಾನ್ ಕ್ರಿಯಾಸ್ ನಂತಹ ಸಮಸ್ಯೆಗಳಿಗೆ, ಹಾಗೂ ಇತರ ಹಾರ್ಮೋನಲ್ ಸಮಸ್ಯೆಗಳಿಗೆ ಇದರ ಜ್ಯೂಸ್ ಸೇವಿಸಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಗೆ ಹೊಟ್ಟೆ ತಂಪು ಮಾಡಿಕೊಳ್ಳಲು ತಂಬುಳಿ ರೆಸಿಪಿ