Select Your Language

Notifications

webdunia
webdunia
webdunia
webdunia

ಹೊಟ್ಟೆ ದಪ್ಪವಾಗಿದೆಯಾ? ಡಯಟ್ ಮಾಡಿ ದೇಹ ದಂಡಿಸುವ ಬದಲು ಈ ಆಹಾರಗಳನ್ನು ಸೇವಿಸಿ

ಹೊಟ್ಟೆ ದಪ್ಪವಾಗಿದೆಯಾ? ಡಯಟ್ ಮಾಡಿ ದೇಹ ದಂಡಿಸುವ ಬದಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 23 ಅಕ್ಟೋಬರ್ 2018 (10:18 IST)
ಬೆಂಗಳೂರು : ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ  ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ  ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ ಆಹಾರಗಳನ್ನು ಸೇವಿಸಿ ಹೊಟ್ಟೆ ದಪ್ಪವಾಗಿರುವುದನ್ನು ಕಡಿಮೆ ಮಾಡಬಹುದು. ಆ ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ.


*ಮೊಳಕೆ ಕಾಳುಗಳು ಹಾಗೂ ಧಾನ್ಯಗಳು : ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.


* ಆರೋಗ್ಯಕರ ಬ್ರೇಕ್‌ಫಾಸ್ಟ್ : ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗುವ ಬದಲು ಕಾಯಿಲೆ ಬರುವುದು ಖಂಡಿತ. ಬೆಳಗ್ಗೆ ಬ್ರೆಡ್ ಸ್ಯಾಂಡ್‌ವಿಚ್‌, ಒಂದು ಗ್ಲಾಸ್‌ ಜ್ಯೂಸ, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.


*ಹೆಸರು ಬೇಳೆ : ಹೆಸರು ಬೇಳೆ ಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ನಾರಿನಂಶ ಇದ್ದು ಕೊಬ್ಬು ಕರಗಿಸುವ ಗುಣವಿದೆ. ಸಾಕಷ್ಟು ಕ್ಯಾಲೊರಿ ನೀಡುವುದರಿಂದ ಬೇಗನೇ ನಮ್ಮ ಹೊಟ್ಟೆ ತುಂಬುತ್ತದೆ.


*ಸೋರೆಕಾಯಿ : ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಪೋಸ್ಪರಸ್ ಮತ್ತು ಪೊಟೇಷಿಯಂ ಹೇರಳವಾಗಿದೆ. ಇದರಲ್ಲಿ ಕೇವಲ 73 ಕ್ಯಾಲೊರಿ ಇದ್ದು ಡಯಟ್ ಗೆ ಹೇಳಿ ಮಾಡಿಸಿದ ತರಕಾರಿ. ಇದರಲ್ಲಿರುವ ವಿಟಮಿನ್ ಗಳು ಬೊಜ್ಜು ಕರಗಿಸಲು ನೆರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆ ಸಮಸ್ಯೆ ಇರುವವರು ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ