Select Your Language

Notifications

webdunia
webdunia
webdunia
webdunia

ಮೊಟ್ಟೆ ಬೇಯಿಸುವಾಗ ಒಡೆಯದಂತೆ ಹಾಗೇ ಇರಲು ಹೀಗೆ ಮಾಡಿ

ಮೊಟ್ಟೆ ಬೇಯಿಸುವಾಗ ಒಡೆಯದಂತೆ ಹಾಗೇ ಇರಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (19:10 IST)
ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇದನ್ನು ಬೇಯಿಸಿ ತಿನ್ನತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಒಡೆದು ಹೋಗುತ್ತದೆ. ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ.


*ಮೊಟ್ಟೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಮಚ ಉಪ್ಪು ಹಾಕಿ, ಆವಾಗ ಮೊಟ್ಟೆ ಒಡೆದು ಹೋಗುವುದಿಲ್ಲ

*ಬೇಯಿಸುವ ಮೊದಲು ಮೊಟ್ಟೆಯನ್ನು ರೂಮ್ ಟೆಂಪ್ರೇಚರ್‍ಗೆ ತನ್ನಿ. ಅಂದರೆ ನೀವು ಫ್ರಿಡ್ಜ್‍ನಲ್ಲಿಟ್ಟಿದರೆ ಅದನ್ನು ಕೂಡಲೇ ಬೇಯಿಸಬೇಡಿ. ಬದಲಿಗೆ ಅದನ್ನು ಹೊರ ತೆಗೆದು ತಂಪು ಆರಿದ ನಂತರ ಬೇಯಿಸಿ.

*ಫ್ರೆಶ್ ಮೊಟ್ಟೆಗಳ ಬದಲಾಗಿ ಹಳೆಯ ಮೊಟ್ಟೆಗಳನ್ನು ಬಳಸಿ. ಯಾಕೆಂದರೆ ಈ ಮೊಟ್ಟೆಯ ಸಿಪ್ಪೆ ಗಟ್ಟಿಯಾಗಿರುತ್ತದೆ.

*ಬೇಯಿಸುವ ಮೊದಲು ಸೇಫ್ಟಿ ಪಿನ್ ಮೂಲಕ ಸಣ್ಣದಾಗಿ ಶೆಲ್ ಮೇಲೆ ಚುಚ್ಚಿ. ಇದರಿಂದ ಮೊಟ್ಟೆ ಒಡೆದು ಹೋಗಲು ಕಾರಣವಾಗುವ ಏರ್ ಬಬಲ್ ಉಂಟಾಗುವುದಿಲ್ಲ.

*ಒಂದು ಬೌಲ್‍ನಲ್ಲಿ ಹಲವಾರು ಮೊಟ್ಟೆಗಳನ್ನು ಹಾಕಬೇಡಿ. ಅದು ಸಾವಾಕಾಶವಾಗಿ ಇರುವಂತೆ ಹಾಕಿ. ನಂತರ ಅದಕ್ಕೆ ನೀರು ಹಾಕಿ. ಒಂದು ಬೌಲ್‍ನಲ್ಲಿ ಮೂರು ಸೆಂ.ಮೀವರೆಗೆ ನೀರು ಹಾಕಿದರೆ ಉತ್ತಮ.

*ಈ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ. ಇದರಿಂದ ಮೊಟ್ಟೆಯನ್ನು ಸುಲಭವಾಗಿ ಸಿಪ್ಪೆ ತೆಗೆಯಲು ಸಹಾಯವಾಗುತ್ತದೆ. ಅಲ್ಲದೇ ಮೊಟ್ಟೆ ಕ್ರಾಕ್ ಆಗೋದರಿಂದ ಬಚಾವಾಗುತ್ತದೆ.

*ಮೊಟ್ಟೆಯನ್ನು ಯಾವತ್ತೂ ಬಿಸಿ ನೀರಿನ ಪಾಟ್‍ಗೆ ನೇರವಾಗಿ ಹಾಕಬೇಡಿ. ಇದರಿಂದ ಮೊಟ್ಟೆ ಬೇಗನೆ ಒಡೆದು ಹೋಗುತ್ತದೆ.
ಒಂದು ಮೊಟ್ಟೆಗೆ ಸರಿಯಾದಂತೆ ಒಂದು ಚಮಚ ವಿನೇಗರ್ ಹಾಕಿ. ನಂತರ ಮೊಟ್ಟೆಯನ್ನು ಬಿಸಿ ಮಾಡಿ. ಇದರಿಂದ ಮೊಟ್ಟೆಯ ಬಿಳಿ ಭಾಗ ಬೇಗನೆ ಗಟ್ಟಿಯಾಗುತ್ತದೆ ಹಾಗೂ ಒಡೆಯುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನ ಹಾಲಿನಲ್ಲಿ ಅಲಸಂದೆ ಪಲ್ಯವನ್ನು ಮಾಡೋದು ಹೇಗೆ ಗೊತ್ತಾ