Select Your Language

Notifications

webdunia
webdunia
webdunia
webdunia

ಹಾಗಲಕಾಯಿಯ ಆರೋಗ್ಯಕರ ಚಮತ್ಕಾರಗಳು..!!!

ಹಾಗಲಕಾಯಿಯ ಆರೋಗ್ಯಕರ ಚಮತ್ಕಾರಗಳು..!!!
ಬೆಂಗಳೂರು , ಗುರುವಾರ, 30 ಆಗಸ್ಟ್ 2018 (18:02 IST)
ಹಾಗಲಕಾಯಿ ರುಚಿಯಲ್ಲಿ ಕಹಿಯಾದ್ದರೂ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ವಿಟಮಿನ್ ಎ ಮತ್ತು ಸಿ ಜೀವಸತ್ವ, ಥಯಮಿನ್, ಕ್ಯಾಲ್ಸಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್ ಅಲ್ಲದೆ, ಗಂಧಯುಕ್ತ ಬಾಷ್ಟ ಶೀಲ ತೈಲ, ಕೆರೋಟಿನ್, ಗ್ಲೂಕೋಸೈಡ್, ಅಲ್ಕಲೈಡ್, ನೆಪೋನಿನ್ ಮತ್ತು ಬಿಟರ್ಸ್ ಅಂಶಗಳು ಹೇರಳವಾಗಿರುತ್ತದೆ.
* ಹಾಗಲಕಾಯಿ ಲಿವರ್ ಶುದ್ಧೀಕರಿಸುತ್ತದೆ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.
 
* ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು.
 
* ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. 
 
* ಬಾಯಿ, ನಾಲಗೆಯ ಹುಣ್ಣುಗಳಿಗೆ ಹಾಗಲಕಾಯಿಯ ರಸವನ್ನು ಸ್ವಲ್ಪ ಬಾಯಿಗೆ ಹಾಕಿಕೊಂಡು 1-2 ನಿಮಿಷ ಬಾಯಿ ಮುಕ್ಕಳಿಸಿ ರಸವನ್ನು ಚೆಲ್ಲಿದರೆ ಹುಣ್ಣು ಗುಣವಾಗುತ್ತದೆ.
 
* ಹಾಗಲಕಾಯಿಯ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ನಿವಾರಣೆಯಾಗುತ್ತದೆ.
 
* ಹಾಗಲಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. 
 
* ಹಾಗಲಕಾಯಿ ಸೇವನೆಯಿಂದ ಚರ್ಮರೋಗ, ಕುರು ಹುಣ್ಣು ಇತ್ಯಾದಿ ಸಮಸ್ಯೆಗಳು ಕಡಿಮೆಯಾಗುತ್ತದೆ.
 
* ಹಾಗಲಕಾಯಿಯ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಿರುವ ಕಿವಿಗೆ 2 ಹನಿಗಳನ್ನು ಹಾಕಿದರೆ ಕೀವು ನೋವು ಮಾಯವಾಗುತ್ತದೆ. 
 
* ಹಾಗಲಕಾಯಿ ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೊರ ಹಾಕಲು ಸಹಾಯಕವಾಗಿದೆ.
 
* ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲಕಾಯಿ ಸಹಾಕಾರಿಯಾಗಿದ್ದು, ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.
 
* ಹಾಗಲಕಾಯಿಯ ಸೇವನೆಯಿಂದ ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.
 
* ಹಾಗಲಕಾಯಿಯ ಸೇವನೆಯಿಂದ ಬೇಧಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗೂ ಚರ್ಮದ ಇತರ ಸಮಸ್ಯೆಗಳು ನಿವಾರಣೆಯಾಗುತ್ತದೆ.
 
* ಕೀಲು ನೋವಿನ ಸಮಸ್ಯೆಯಿಂದ ಬಳಲುವವರು ಹಾಗಲಕಾಯಿ ಪಲ್ಯ ಸೇವಿಸುವ ಮತ್ತು ಹಾಗಲಕಾಯಿ ಗಿಡದ ಎಲೆಗಳ ರಸವನ್ನು ಹೆಚ್ಚುವುದರಿಂದ ಸಾಕಷ್ಟು ನಿವಾರಣೆಯಾಗುತ್ತದೆ.
 
* ವಿಟಮಿನ್ 'ಎ' ಸಮೃದ್ಧವಾಗಿರುವ ಕಾರಣ ಇದರ ನಿಯಮಿತ ಸೇವನೆ ಇರುಳುಗುಡುಡುತನ ಕಳೆಯುತ್ತದೆ.
 
* ಕಾಲರಾ, ಜಾಂಡಿಸ್ ಮತ್ತು ಹುಳುಕಡ್ಡಿಯಂತಹ ಅಪಾಯಕಾರಿ ರೋಗಗಳ ತಡೆಯಲು ಇದು ರಾಮಬಾಣವಾಗಿದೆ. 
 
* ಆಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತ್ತ್ಯುತ್ತಮ.
 
* ಹಾಗಲಕಾಯಿ ಪಲ್ಯ ಸೇವಿಸಿದರೆ ಮಲಬದ್ಧತೆ ತೊಂದರೆ ಕಡಿಮೆಯಾಗುತ್ತದೆ.
 
* ಹಾಗಲಕಾಯಿ ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸಿ, ಇನ್ಸುಲಿನ್ ಉತ್ಪಾದನೆಗೆ ಪ್ರಚೋದಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕ್ಕೂ ಒಳ್ಳೆಯದು ನೋಡಿ ಈ ಸಾಂಬಾರು ಪದಾರ್ಥ