Select Your Language

Notifications

webdunia
webdunia
webdunia
webdunia

ನೇರಳೆಹಣ್ಣು ತಿಂದರೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…?

ನೇರಳೆಹಣ್ಣು ತಿಂದರೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…?
ಬೆಂಗಳೂರು , ಸೋಮವಾರ, 14 ಮೇ 2018 (16:58 IST)
ಬೆಂಗಳೂರು: ನೇರಳೆಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಒಳ್ಳೆಯ ಅಂಶಗಳಿವೆ. ಇದು ಎಲ್ಲ ಸೀಸನ್‌ಗಳಲ್ಲೂ ಸಿಗಲ್ಲ.ಸಿಕ್ಕಾಗ ಇದನ್ನು ತಿಂದರೆ ಸಾಕಷ್ಟು ಲಾಭವಿದೆ.


ನೇರಳೆಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಿಣ ಮಾಡಿ, ಅದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆ ಕಲೆಗಳನ್ನು ನಿಯಂತ್ರಿಸಬಹುದು. ಕೆಲವು ದಿನ ಇದೇ ರೀತಿ ಮಾ‌ಡಿದರೆ ಅದರ ಫಲಿತಾಂಶ ಕಾಣಸಿಗುತ್ತದೆ.


ನೇರಳೆಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಅದೇ ಕಾರಣಕ್ಕಾಗಿ ಹಲ್ಲಿನ ಆರೋಗ್ಯ ಸುಧಾರಣೆಗೆ ತಯಾರಿಸುವ ಔಷಧಿಗಳಲ್ಲಿ ನೇರಳೆಹಣ್ಣನ್ನು ಬಳಸಲಾಗುತ್ತದೆ.

ನೇರಳೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ಅಜೀರ್ಣ ಸಮಸ್ಯೆಗೂ ಪರಿಹಾರ ದೊರೆಯಲಿದೆ.

ನೇರಳೆಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ರಕ್ತ ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೇರಳೆಹಣ್ಣು ಸಹಕಾರಿಯಾಗಲಿದೆ.

ಕೆಲವರಿಗೆ ಆಯಿಲ್ ಸ್ಕಿನ್ ಇರುತ್ತದೆ. ನೇರಳೆಹಣ್ಣಿನ ಸೇವನೆಯಿಂದ ತ್ವಚೆಯಲ್ಲಿನ ಎಣ್ಣೆಯನ್ನು ನಿಯಂತ್ರಿಸಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಊಟವಾದ ನಂತರ ಸೆಕ್ಸ್ ಮಾಡಿದರೆ ಏನಾದರೂ ಅಪಾಯವಿದೆಯೇ ಎಂಬ ಅನುಮಾನಕ್ಕೆ ಇಲ್ಲಿದೆ ಉತ್ತರ!