ಈ ರೀತಿ ಚಹಾ ಮಾಡಿಕೊಂಡು ಕುಡಿದರೆ ಹೊಟ್ಟೆ ಕರಗುವುದು ಖಂಡಿತಾ!

ಗುರುವಾರ, 29 ನವೆಂಬರ್ 2018 (09:10 IST)
ಬೆಂಗಳೂರು: ದಪ್ಪ ಹೊಟ್ಟೆಯಿಂದ ಅಸಹ್ಯವಾಗಿ ಕಾಣುತ್ತಿದ್ದೀರಿ ಎಂಬ ಚಿಂತೆಯೇ? ಹಾಗಿದ್ದರೆ ಪ್ರತಿನಿತ್ಯ ಹೀಗೆ ಚಹಾ ಮಾಡಿ ಸೇವಿಸಿ.


ಹೌದು. ಭಾರತೀಯರು ಹೆಚ್ಚಾಗಿ ಸೇವಿಸುವ ಬ್ಲ್ಯಾಕ್ ಟೀ ಹೊಟ್ಟೆಯ ಬೊಜ್ಜು ಕರಗಿಸುತ್ತದೆ. ಹಲವು ಅಧ್ಯಯನಗಳೇ ಇದನ್ನು ಸಾಬೀತುಪಡಿಸಿವೆ. ಹೀಗಾಗಿ ಸ್ಲಿಮ್ ಆಗಲು ಬಯಸುವವರು ಬ್ಲ್ಯಾಕ್ ಟೀ ಸೇವಿಸಬಹುದು.

ಅಷ್ಟೇ ಅಲ್ಲ, ಬ್ಲ್ಯಾಕ್ ಟೀಯಲ್ಲಿರುವ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಹಾಗೆಯೇ ಹೃದಯದ ಆರೋಗ್ಯ, ರಕ್ತದೊತ್ತಡ ಏರದಂತೆ ಕಾಪಾಡುವುದು. ಹಾಗೆಯೇ ಕ್ಯಾನ್ಸರ್ ಬರದಂತೆ ತಡೆಗಟ್ಟುವ ಗುಣ, ರಕ್ತದಲ್ಲಿ ಮಧುಮೇಹದ ಅಂಶ ಹೆಚ್ಚದಂತೆ ನೋಡಿಕೊಳ್ಳುವ ಗುಣವೂ ಬ್ಲ್ಯಾಕ್ ಟೀಯಲ್ಲಿದೆಯಂತೆ! ಹಾಗಾಗಿ ತಪ್ಪದೇ ಬ್ಲ್ಯಾಕ್ ಟೀ ಕುಡಿಯಿರಿ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನೆಲಗಡಲೆ ಮತ್ತು ಬೆಲ್ಲ ಜತೆಯಾಗಿ ತಿಂದರೆ ಏನು ಲಾಭ ಗೊತ್ತಾ?