Select Your Language

Notifications

webdunia
webdunia
webdunia
webdunia

ಮೈಮೇಲೆ ಬೀಳುವ ಪುರುಷರಿಂದ ದೂರವಿರುವುದು ಹೇಗೆ?

ಮೈಮೇಲೆ ಬೀಳುವ ಪುರುಷರಿಂದ ದೂರವಿರುವುದು ಹೇಗೆ?
ಬೆಂಗಳೂರು , ಶನಿವಾರ, 20 ಅಕ್ಟೋಬರ್ 2018 (09:42 IST)
ಬೆಂಗಳೂರು: ನಮ್ಮ ಸುತ್ತಮುತ್ತ ಇರುವವರೆಲ್ಲಾ ಒಳ್ಳೆಯವರಾಗಿರಬೇಕೆಂದಿಲ್ಲ. ನಮ್ಮ ಮನಸ್ಸು ಎಷ್ಟೇ ಶುದ್ಧವಾಗಿದ್ದರೂ ನಮ್ಮ ಜತೆ ಇರುವ ಪುರುಷರು ಮೈಮೇಲೇ ಬೀಳಲು ಬರುತ್ತಿದ್ದರೆ ಮಹಿಳೆಯರು ಏನು ಮಾಡಬೇಕು?
 

ಆತನೊಂದಿಗೆ ತಮಾಷೆ ಬೇಡ
ಅಂತಹ ವ್ಯಕ್ತಿಗಳೊಂದಿಗೆ ಆದಷ್ಟು ತಮಾಷೆಯ, ಹರಟೆಗಳಲ್ಲಿ ತೊಡಗಿಸಿಕೊಳ್ಳದೇ ಇರುವುದೇ ಒಳ್ಳೆಯದು. ಆದಷ್ಟು ಗಂಭೀರವಾಗಿದ್ದು, ಅಗತ್ಯವಿದ್ದರೆ ಮಾತ್ರ ಮಾತನಾಡಿದರೆ ಸಾಕು.

ಒಂಟಿಯಾಗಿ ಸಿಗಬೇಡಿ
ಅಂತಹ ವ್ಯಕ್ತಿಗಳೊಂದಿಗೆ ಒಂಟಿಯಾಗಿ ಇರುವ ಸಂದರ್ಭ ತಂದುಕೊಳ್ಳಬೇಡಿ. ಆದಷ್ಟು ಗುಂಪಿನೊಂದಿಗೇ ಆತನನ್ನು ಮೀಟ್ ಮಾಡಿ.

ನಿಮ್ಮ ದೇಹ ಭಾಷೆ
ನಿಮ್ಮ ವೇಷಭೂಷಣ, ದೇಹ ಭಾಷೆ ಆತನನ್ನು ಉತ್ತೇಜನಗೊಳಿಸುವಂತೆ ಇರಿಸಬೇಡಿ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವುದು ಉತ್ತಮವೇ. ಆದರೆ ಎಷ್ಟು ಬೇಕು ಅಷ್ಟೇ ಇದ್ದರೆ ಉತ್ತಮ.

ನೇರವಾಗಿ ಮಾತನಾಡಿ
ಧೈರ್ಯವಿದೆ ಎಂದಾದರೆ ಆತನ ಸ್ವಭಾವ ಇಷ್ಟವಾಗುತ್ತಿಲ್ಲ ಎಂದು ನೇರವಾಗಿ ಹೇಳಿ. ಆದರೆ ಹೇಳುವಾಗ ಆತ ಮುಂದೊಂದು ದಿನ ಧ್ವೇಷ ಸಾಧಿಸುವಂತೆ ಅವಮಾನಿಸಬೇಡಿ. ಖಡಕ್ಕಾಗಿ ನೇರವಾಗಿ ಮಾತನಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವುಕ ವ್ಯಕ್ತಿಗಳು ಹೆಚ್ಚು ಖರ್ಚು ಮಾಡಲ್ವಂತೆ!