Select Your Language

Notifications

webdunia
webdunia
webdunia
webdunia

ಬೆಳಗಿನ ಉಪಹಾರ ಸೇವಿಸದೇ ಇರುವವರು ಶೀಘ್ರವೇ ಎಚ್ಚೆತ್ತುಕೊಳ್ಳಿ. ಯಾಕೆ ಗೊತ್ತಾ?

ಬೆಳಗಿನ ಉಪಹಾರ ಸೇವಿಸದೇ ಇರುವವರು ಶೀಘ್ರವೇ ಎಚ್ಚೆತ್ತುಕೊಳ್ಳಿ. ಯಾಕೆ ಗೊತ್ತಾ?
ಬೆಂಗಳೂರು , ಭಾನುವಾರ, 8 ಜುಲೈ 2018 (06:42 IST)
ಬೆಂಗಳೂರು : ಬೆಳಗಿನ ಉಪಹಾರ ಸೇವಿಸದೇ ಇರುವ ಅಭ್ಯಾಸ ಹೊಂದಿದವರು, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆಯಂತೆ.


ಹೌದು, ಬೆಳಗಿನ ಉಪಹಾರ ಸೇವಿಸದೇ ಇದ್ದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಅಮೆರಿಕದ ಮೇಯೊ ಕ್ಲಿನಿಕ್ ನ ಸಂಶೋಧಕರು. ಬೆಳಗಿನ ಉಪಹಾರ ಸೇವಿಸದೇ ಇರುವವರನ್ನು ಉಪಹಾರ ಸೇವಿಸುವವರೊಂದಿಗೆ ಹೋಲಿಕೆ ಮಾಡಲಾಗಿದ್ದು, ಉಪಹಾರ ಸೇವನೆ ಮಾಡದೇ ಇದ್ದ ಶೇ.26.7 ರಷ್ಟು ಜನರಲ್ಲಿ ಬೊಜ್ಜು ಹೆಚ್ಚಾಗಿರುವುದು ಅಧ್ಯಯನ ವರದಿ ವೇಳೆ ಬೆಳಕಿಗೆ ಬಂದಿದೆ.


2005 ರಿಂದ 2017 ರ ವರೆಗೆ 18-87 ವಯಸ್ಸಿನ ಸುಮಾರು 347 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ನಿಯಮಿತವಾಗಿ ತೂಕ, ಸೊಂಟ ಮತ್ತು ಸೊಂಟದ ಸುತ್ತಳತೆಯನ್ನು ಪರೀಕ್ಷಿಸಲಾಗುತ್ತಿತ್ತು. ಉಪಹಾರ ಸೇವಿಸದೇ ಇದ್ದವರ ಸೊಂಟದ ಸುತ್ತಳತೆ ಉಪಹಾರ ಸೇವಿಸುವವರ ಸೊಂಟದ ಸುತ್ತಳತೆಗಿಂತ ಸರಾಸರಿ ಶೇ.9.8 ಸೆಂಟಿಮೀಟರ್ ಹೆಚ್ಚಿತ್ತು, ಆದ್ದರಿಂದ ಬೊಜ್ಜು, ಸ್ಥೂಲ ಕಾಯದ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಬೆಳಿಗ್ಗೆ ಉಪಹಾರ ಸೇವಿಸುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ