Webdunia - Bharat's app for daily news and videos

Install App

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರಗಳು

Webdunia
ಶುಕ್ರವಾರ, 8 ಜೂನ್ 2018 (14:03 IST)
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ನಮ್ಮಲ್ಲಿ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ನಾವು ಅತಿಯಾಗಿ ತಿಂದಾಗ ಹೊಟ್ಟೆ ಉಬ್ಬರ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ಕಡಿಮೆ ತಿಂದರೂ ಸಹ ಈ ಸಮಸ್ಯೆ ಕಂಡುಬರುತ್ತದೆ... ಹೀಗೇಕೆ ಎಂದು ಯೋಚಿಸುತ್ತೀರಾ? ಇಲ್ಲಿದೆ ವಿವರ.
1.  ಕಡಿಮೆ ನೀರು ಕುಡಿಯೋದು:
ಇತ್ತೀಚಿನ ದಿನದಲ್ಲಿ ಯಾವುದಕ್ಕೂ ಪುರುಸೊತ್ತೇ ಇರಲ್ಲ.. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುತ್ತಾರೆ. ತುಂಬಾ ಜನ ನೀರನ್ನು ಕಡಿಮೆ ಕುಡಿಯುತ್ತಾರೆ. ಇದು ಹೊಟ್ಟೆ ಉಬ್ಬರಕ್ಕೆ ಮೂಲ ಕಾರಣವಾಗಿರುತ್ತದೆ. ಈ ಸಮಸ್ಯೆ ಇರುವವರು ಆಗಾಗ್ಗೆ ನೀರು ಕುಡಿಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ನೀರು ಹೆಚ್ಚು ಕುಡಿಯುವುದರಿಂದ ಜೀರ್ಣಕ್ರಿಯೆಗೂ ಸಹಾಯಕಾರಿಯಾಗಿರುತ್ತದೆ.
 
2. ಗಬ ಗಬ ಅಂತ ಗಡಿಬಿಡಿಲಿ ತಿನ್ನೋದು:
ಯಾವತ್ತೂ ಗಡಿಬಿಡಿಯಲ್ಲಿ ತಿನ್ನಬೇಡಿ, ಹೀಗೆ ಮಾಡಿದಾಗ ಗಾಳಿ ಹೊಟ್ಟೆ ಒಳಗೆ ಸೇರಿಕೊಂಡು ನಿಮ್ಮ ಹೊಟ್ಟೆ ಊದಿಕೊಳ್ಳುತ್ತದೆ. ಅಲ್ಲದೇ ಈ ಸಮಸ್ಯೆ ಇರುವವರು ಆಹಾರವನ್ನು ನಿಂತು ಸೇವನೆ ಕೂಡಾ ಮಾಡದಿರುವುದು ಉತ್ತಮ.
 
3. ಹೆಚ್ಚು ಒತ್ತಡದ ಜೀವನ:
ದೇಹಕ್ಕೆ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಯತ್ನಿಸಿ ಏಕೆಂದರೆ ದೇಹಕ್ಕೆ ಒತ್ತಡ ಹೆಚ್ಚಾದಂತೆ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆಗಿ ಹೊಟ್ಟೆ ಉಬ್ಬರಿಸುತ್ತೆ. ಹಾಗಾಗಿ ಸ್ವಲ್ಪ ಯೋಗ, ಧ್ಯಾನ, ವ್ಯಾಯಾಮವನ್ನು ನಿಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳಿ ಈ ಮೂಲಕ ಈ ಉಬ್ಬರ ಸಮಸ್ಯೆಯಿಂದ ಪಾರಾಗಬಹುದು.
 
4. ರಾತ್ರಿ ತಡವಾಗಿ ಊಟ ಮಾಡೋದು:
ರಾತ್ರಿ ತಡವಾಗಿ ಊಟ ಮಾಡಿದರೆ, ಊಟ ಮಾಡಿದ ತಕ್ಷಣ ಮಲಗಬೇಕಾಗುತ್ತದೆ. ಆಗ ಸರಿಯಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಬೆಳಿಗ್ಗೆ ಹೊಟ್ಟೆ ಉಬ್ಬರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿನಿತ್ಯ ನಿಗದಿತ ವೇಳೆಗೆ ಊಟ ಮಾಡುವುದನ್ನು ರೂಢಿಸಿಕೊಳ್ಳಿ ಅಲ್ಲದೇ ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ದಲ್ಲಿ ಅದನ್ನು ತ್ಯಜಿಸುವುದೇ ಸೂಕ್ತ
 
5. ಬಬಲ್ ಗಮ್ ಸೇವನೆ:
ಬಬಲ್ ಗಮ್ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬಬಲ್ ಗಮ್‌ನಲ್ಲಿರೋ ಸಕ್ಕರೆಯ ಅಂಶ (ಶುಗರ್ ಆಲ್ಕೋಹಾಲ್) ನಮ್ಮ ದೇಹದ ಜೀರ್ಣಕ್ರಿಯೆಗೆ ಹಾನಿ ಮಾಡುತ್ತದೆ. ಇದು ಹೊಟ್ಟೆ ಉಬ್ಬರದಿಂದ ಪ್ರಾರಂಭಿಸಿ ಅತಿಸಾರದ ಸಮಸ್ಯೆ ಸಹ ಉಂಟುಮಾಡಬಹುದು.
 
ನಿಯಮಿತ ಆಹಾರ ಸೇವನೆ, ಸರಿಯಾದ ಆಹಾರ ಕ್ರಮ ಮತ್ತು ಸ್ವಲ್ಪ ವ್ಯಾಯಾಮವನ್ನು ರೂಢಿಸಿಕೊಳ್ಳುವುದರ ಮೂಲಕ ಆರೋಗ್ಯಯುತ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬೇಸಿಗೆಯಲ್ಲಿ ಈ ಐದು ಹಣ್ಣುಗಳನ್ನು ಸೇವಿಸಿ: ಅಚ್ಚರಿ ಬದಲಾವಣೆ ಕಾಣುತ್ತೀರಿ

ಬೆಳ್ಳುಳ್ಳಿಯನ್ನು ತಿನ್ನುವ ಸರಿಯಾದ ಕ್ರಮ ಹೀಗಿರಲಿ

ಸಿಹಿ ಕುಂಬಳಕಾಯಿ ಬಳಸಿ ಫೇಸ್ ಪ್ಯಾಕ್ ತಯಾರಿಸಿ

ತೂಕ ಕಡಿಮೆಯಾಗಬೇಕಾದರೆ ಈ ಯೋಗ ಮಾಡಿ

ಹಲ್ಲಿನ ವಸಡಿನಲ್ಲಿ ರಕ್ತ ಬರಲು ಕಾರಣಗಳು

ಮುಂದಿನ ಸುದ್ದಿ
Show comments