Select Your Language

Notifications

webdunia
webdunia
webdunia
webdunia

ಗುಲಾಬಿ ಹೂವಿನ ಚಹಾದ ಲಾಭಗಳು

ಗುಲಾಬಿ ಹೂವಿನ ಚಹಾದ ಲಾಭಗಳು
ಬೆಂಗಳೂರು , ಗುರುವಾರ, 12 ಜುಲೈ 2018 (17:09 IST)
ಒಂದು ಆರೋಗ್ಯಕರ ಗಿಡಮೂಲಿಕೆ ಚಹಾಗಳಲ್ಲಿ ಒಂದಾಗಿದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಇತರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. 
- ಇದು ಮುಟ್ಟಿನ ದಿನಗಳಲ್ಲಿ ಆಗುವ ಹೊಟ್ಟೆ ನೋವು ಕಡಿಮೆ ಮಾಡುತ್ತದೆ
- ದೀರ್ಘಕಾಲದ ಕಾಯಿಲೆ ತಡೆಗಟ್ಟತ್ತದೆ
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
- ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ
- ನೈಸರ್ಗಿಕವಾಗಿ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ
- ಇದು ಗಂಟಲು ನೋವನ್ನು ಕಡಿಮೆ ಮಾಡುತ್ತದೆ
- ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ
- ಸಂಧಿವಾತದ ಉರಿಯೂತವನ್ನು ಕಡಿಮೆ ಮಾಡುತ್ತದೆ
 
ಮುಖ್ಯವಾಗಿ ದೇಹದ ತೂಕವನ್ನು ಕಡಿಮೆ ಮಾಡಲು ಇದರ ಸೇವನೆ ಮಾಡಲಾಗುತ್ತದೆ.
 
ಗುಲಾಬಿ ಹೂವಿನ ಚಹಾ ಮಾಡುವುದು ಹೇಗೆ?
 
ಬೇಕಾಗುವ ಸಾಮಗ್ರಿಗಳು -
1 ಕಪ್ ಚೆನ್ನಾಗಿ ತೊಳೆದ ತಾಜಾ ಗುಲಾಬಿ ಹೂವಿನ ಪಕಳೆ
3 ಕಪ್ ಬಿಸಿ ನೀರು
1/2 ಚಮಚ ಜೇನು ತುಪ್ಪ
 
ಮಾಡುವ ವಿಧಾನ -
- ಒಂದು ಚಿಕ್ಕ ಬಾಣಲೆಯಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ಹಾಕಿ 5 ನಿಮಿಷ ಪಕ್ಕಕ್ಕಿರಿಸಿ (ಕುದಿಸ ಬೇಡಿ).
- ನಂತರ ಇದರಿಂದ ಗುಲಾಬಿ ಹೂವಿನ ಪಕಳೆಗಳನ್ನು ಬೇರ್ಪಡಿಸಿ, ಒಂದು ಲೋಟದಲ್ಲಿ ನೀರನ್ನು ತೆಗೆದು, ಅದಕ್ಕೆ ಜೇನು ತುಪ್ಪವನ್ನು ಸೇರಿಸಿ ಸವಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆನೋವಿಗೆ ಈ 4 ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ