Select Your Language

Notifications

webdunia
webdunia
webdunia
webdunia

ವಿಂಡೀಸ್ ಸರಣಿಗೆ ಆಯ್ಕೆಯಾಗಬೇಕಾದರೆ ವಿರಾಟ್ ಕೊಹ್ಲಿ ಈ ಪರೀಕ್ಷೆ ಪಾಸಾಗಲೇಬೇಕು!

ವಿಂಡೀಸ್ ಸರಣಿಗೆ ಆಯ್ಕೆಯಾಗಬೇಕಾದರೆ ವಿರಾಟ್ ಕೊಹ್ಲಿ  ಈ ಪರೀಕ್ಷೆ ಪಾಸಾಗಲೇಬೇಕು!
ಮುಂಬೈ , ಶುಕ್ರವಾರ, 28 ಸೆಪ್ಟಂಬರ್ 2018 (09:02 IST)
ಮುಂಬೈ: ಏಷ್ಯಾ ಕಪ್ ಇನ್ನೇನು ಮುಗಿದಿದೆ. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಆದರೆ ಇದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿಗೆ ಫಿಟ್ ನೆಸ್ ಪರೀಕ್ಷೆ ಪಾಸಾಗಲೇಬೇಕಿದೆ.

ಸದ್ಯಕ್ಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬೇಕಾದರೆ ಆಟಗಾರರು ಯೋ ಯೋ ಫಿಟ್ನೆಸ್ ಟೆಸ್ಟ್ ಪಾಸಾಗಲೇಬೇಕು ಎಂಬ ನಿಯಮವಿದೆ. ಸತತ ಕ್ರಿಕೆಟ್ ನಿಂದ ಬಳಲಿದ ಕಾರಣ ಏಷ್ಯಾ ಕಪ್ ನಿಂದ ವಿಶ್ರಾಂತಿ ಪಡೆದ ಕೊಹ್ಲಿಗೂ ಇದು ಅನ್ವಯವಾಗಲಿದೆ.

ಕೆಲವೊಂದು ಮೂಲಗಳ ಪ್ರಕಾರ ವಿಂಡೀಸ್ ಸರಣಿಗೆ ಮೊದಲು ಕೊಹ್ಲಿ ಯೋ ಯೋ ಟೆಸ್ಟ್ ಗೆ ಹಾಜರಾಗಲಿದ್ದಾರೆ. ಇದರಲ್ಲಿ ಪಾಸಾದರೆ ಮಾತ್ರ ವಿಂಡೀಸ್ ಸರಣಿಗೆ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಫೈನಲ್ ಗೂ ಮೊದಲು ಟೀಂ ಇಂಡಿಯಾಕ್ಕೆ ಹೊಸ ತಲೆನೋವು