Select Your Language

Notifications

webdunia
webdunia
webdunia
webdunia

ಐಪಿಎಲ್: ಕೆಲವು ಪಂದ್ಯಗಳಿಂದ ಹೊರಗುಳಿಯುವ ಸೂಚನೆ ನೀಡಿದ ವಿರಾಟ್ ಕೊಹ್ಲಿ

ಐಪಿಎಲ್: ಕೆಲವು ಪಂದ್ಯಗಳಿಂದ ಹೊರಗುಳಿಯುವ ಸೂಚನೆ ನೀಡಿದ ವಿರಾಟ್ ಕೊಹ್ಲಿ
ಚೆನ್ನೈ , ಭಾನುವಾರ, 24 ಮಾರ್ಚ್ 2019 (09:05 IST)
ಚೆನ್ನೈ: ಈ ಬಾರಿ ಐಪಿಎಲ್ ಪಂದ್ಯಾವಳಿಯ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸೂಚನೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ನೀಡಿದ್ದಾರೆ.


ಐಪಿಎಲ್ ಮುಗಿದ ಬಳಿಕ ವಿಶ್ವಕಪ್‍ ಬರಲಿದ್ದು, ಈ ಮಹಾನ್ ಕೂಟಕ್ಕೆ ಫಿಟ್ ಆಗಿರಲು ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅವರು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯಕ್ಕೂ ಮೊದಲು ಮಾತನಾಡಿದ್ದ ಕೊಹ್ಲಿ ‘ನಮ್ಮ ದೇಹ ನಮ್ಮ ಜವಾಬ್ಧಾರಿ. ಯಾವುದೇ ರೀತಿಯ ನೋವು, ದೈಹಿಕ ತೊಂದರೆ ಕಂಡುಬಂದರೆ ತಕ್ಷಣವೇ ಫಿಸಿಶಿಯನ್‍ ಗೆ ತಿಳಿಸಿ. ಅವರು ಆಡಬೇಡಿ ಎಂದರೆ ಮಾತು ಕೇಳಿ. ಐಪಿಎಲ್ ವೇಳೆ ಭಾರತೀಯ ಆಟಗಾರರು ಎಷ್ಟು ಆರಾಮವಾಗಿರುತ್ತಾರೆ ಎಂದು ನನಗೆ ಗೊತ್ತಿಲ್ಲ. ನಾವು ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಧೋನಿಯ ಎರಡು ಶಿಷ್ಯಂದಿರ ನಡುವೆ ಇಂದು ಪೈಪೋಟಿ