ವಿರಾಟ್ ಕೊಹ್ಲಿ ತನ್ನ ಪತ್ನಿಗೆ ಕೊಟ್ಟ ಉಂಗುರದ ಬೆಲೆಯೆಷ್ಟು ಗೊತ್ತಾ?!

ಶನಿವಾರ, 16 ಡಿಸೆಂಬರ್ 2017 (08:38 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮದುವೆಗೆ ಮೊದಲು ಪತ್ನಿ ಅನುಷ್ಕಾ ಶರ್ಮಾ ಜತೆ ಉಂಗುರ ಬದಲಾಯಿಸಿಕೊಂಡಿದ್ದರು. ಅನುಷ್ಕಾಗೆ ಕೊಟ್ಟ ಆ ಉಂಗುರದ ವಿಶೇಷತೆಯೇನು ಗೊತ್ತಾ?
 

ಈ ಉಂಗುರವನ್ನು ಆಸ್ಟ್ರಿಯಾದ ಹಿರಿಯ ಡಿಸೈನರ್ ಡಿಸೈನ್ ಮಾಡಿದ್ದರಂತೆ. ಅದು ಎಷ್ಟು ವಿಶೇಷವೆಂದರೆ ಯಾವ ಆಂಗಲ್ ನಿಂದ ನೋಡಿದರೂ ವಿಶೇಷವಾಗಿ ಕಾಣುತ್ತದಂತೆ. ಅಷ್ಟೇ ಅಲ್ಲ, ಇದರ ಹೊಳಪು ಯುವತಿಯರನ್ನು ಆಕರ್ಷಿಸದೇ ಇರದಂತೆ. ಈ ವಿಶೇಷ ಉಂಗುರ ಆಯ್ಕೆ ಮಾಡಲು ಕೊಹ್ಲಿ ಮೂರು ತಿಂಗಳು ತೆಗೆದುಕೊಂಡಿದ್ದರಂತೆ.

ಈ ಡೈಮಂಡ್ ರಿಂಗ್ ನ ಬೆಲೆ ಬರೋಬ್ಬರಿ 1 ಕೋಟಿ ರೂ. ! ಬೆಲೆ ಮಾತ್ರವಲ್ಲ, ಅದು ಅಷ್ಟೇ ವಿಶೇಷವಾಗಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING