Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಕೈ ಹಿಡಿಯುತ್ತಿರುವ ಚೆಲುವೆ ಯಾರು ಗೊತ್ತೆ?

ರೋಹಿತ್ ಶರ್ಮಾ ಕೈ ಹಿಡಿಯುತ್ತಿರುವ ಚೆಲುವೆ ಯಾರು ಗೊತ್ತೆ?
ಮುಂಬೈ , ಸೋಮವಾರ, 4 ಮೇ 2015 (09:37 IST)
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಜತೆ ಹಸೆಮಣೆ ಏರಿದ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಆಪ್ತ ಗೆಳತಿ ರಿತಿಕಾಳನ್ನು ಮದುವೆಯಾಗುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. 

ಈಡನ್ ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿ ವಿಶ್ವದಾಖಲೆ ಮಾಡಿರುವ ರೋಹಿತ್  ರಿತಿಕಾಳನ್ನು ಕಳೆದ 6 ವರ್ಷಗಳಿಂದ ಬಲ್ಲರು.
 
ವರದಿಗಳ ಪ್ರಕಾರ 28 ವರ್ಷದ ರೋಹಿತ್ ರಿತಿಕಾಳನ್ನು (28) ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬೊರಿವಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪ್ರಥಮ ಬಾರಿ ಭೇಟಿಯಾಗಿದ್ದರು.
 
ರೋಹಿತ್ ಶರ್ಮಾ ಭಾನುವಾರ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ತಮ್ಮ ಗೆಳತಿ ಹಾಗೂ ಭಾವಿ ಪತ್ನಿ ರಿತಿಕಾಳ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
 
ನನ್ನ ಆಪ್ತ ಗೆಳತಿಯನ್ನೇ ಜೀವನ ಸಂಗಾತಿಯಾಗಿ ಪಡೆಯುವುದಕ್ಕಿಂತ ಭಾಗ್ಯ ಬೇರೆ ಇಲ್ಲ ಎಂದು ರೋಹಿತ್ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. 
 
ರೋಹಿತ್ ತಮ್ಮ ಮದುವೆ ಯಾವಾಗ ಎಂದು ಎಲ್ಲೂ ತಿಳಿಸಿಲ್ಲ. ಐಪಿಎಲ್‍ನಲ್ಲಿ ಬ್ಯುಸಿಯಾಗಿರುವ ರೋಹಿತ್ ಐಪಿಎಲ್ ಮುಗಿದ ನಂತರ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada