ಅಸಭ್ಯ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಬ್ಯಾನರ್ ಹಿಡಿದು ಲೇವಡಿ ಮಾಡಿದ ಮಹಿಳೆ!

ಭಾನುವಾರ, 10 ಫೆಬ್ರವರಿ 2019 (08:22 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಇದೀಗ ನಿಷೇಧ ಶಿಕ್ಷೆ ಮುಗಿಸಿ ಟೀಂ ಇಂಡಿಯಾಕ್ಕೆ ಮರಳಿದರೂ ವೀಕ್ಷಕರಿಗೆ ಅವರ ಮೇಲಿನ ಆಕ್ರೋಶ ಕಡಿಮೆಯಾಗಿಲ್ಲ.


ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮಹಿಳೆಯೊಬ್ಬರು ‘ಈವತ್ತೂ ಮಾಡಿ ಬಂದಿದ್ದೀಯಾ?’ ಎಂದು ಲೇವಡಿ ಮಾಡುವಂತಹ ಬ್ಯಾನರ್ ಹಿಡಿದು ಹಾರ್ದಿಕ್ ರನ್ನು ವ್ಯಂಗ್ಯವಾಡಿದ್ದಾರೆ.

ಕರಣ್ ಶೋನಲ್ಲಿ ಹಾರ್ದಿಕ್ ಸೆಕ್ಸ್ ಮತ್ತು ಮಹಿಳೆ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಅವರ ಜತೆ ಶೋನಲ್ಲಿ ಪಾಲ್ಗೊಂಡ ಕೆಎಲ್ ರಾಹುಲ್ ಕೂಡಾ ಬಲಿಪಶುವಾಗಿದ್ದರು. ಇದೀಗ ಇಬ್ಬರೂ ಕ್ರಿಕೆಟಿಗರು ಸುಪ್ರೀಂಕೋರ್ಟ್ ವಿಚಾರಣೆಗೊಳಪಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING