Select Your Language

Notifications

webdunia
webdunia
webdunia
webdunia

ಇಷ್ಟು ದಿನದ ಘನತೆಯನ್ನು ಒಂದೇ ಕ್ಷಣದಲ್ಲಿ ಕೈ ಚೆಲ್ಲಿದ ಹಾರ್ದಿಕ್ ಪಾಂಡ್ಯ!

ಇಷ್ಟು ದಿನದ ಘನತೆಯನ್ನು ಒಂದೇ ಕ್ಷಣದಲ್ಲಿ ಕೈ ಚೆಲ್ಲಿದ ಹಾರ್ದಿಕ್ ಪಾಂಡ್ಯ!
ಸೆಂಚೂರಿಯನ್ , ಸೋಮವಾರ, 15 ಜನವರಿ 2018 (14:54 IST)
ಸೆಂಚೂರಿಯನ್: ಟೀಂ ಇಂಡಿಯಾದ ಎಲ್ಲಾ ಬ್ಯಾಟ್ಸ್ ಮನ್ ಗಳು ಪರದಾಡುವಾಗ ತಾವೊಬ್ಬರೇ ಹೋರಾಡಿ ಬ್ಯಾಟಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಬಗ್ಗೆ ಇದುವರೆಗೆ ಎಲ್ಲರಿಗೂ ಮೆಚ್ಚುಗೆಯಿತ್ತು. ಆದರೆ ಅದನ್ನು ಅವರು ಇಂದು ಒಂದೇ ಕ್ಷಣದಲ್ಲಿ ಹಾಳು ಮಾಡಿಕೊಂಡರು.
 

ತೃತೀಯ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿಗೆ ಉತ್ತಮವಾಗಿ ಸಾಥ್ ನೀಡಿ ಪಂದ್ಯವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದರು. ಆದರೆ ಅತಿಯಾದ ಆತ್ಮವಿಶ್ವಾಸ ಎನ್ನುವುದು ಎಂತಹಾ ಆಟಗಾರರನ್ನೂ ಮುಳುಗಿಸಿ ಬಿಡುತ್ತದೆ ಎನ್ನುವುದಕ್ಕೆ ಪಾಂಡ್ಯ ಔಟಾದ ರೀತಿ ಸಾಕ್ಷಿಯಾಯಿತು.

ಫಿಲ್ಯಾಂಡರ್ ನೇರವಾಗಿ ವಿಕೆಟ್ ಕಡೆಗೆ ಚೆಂಡು ಎಸೆಯುತ್ತಿದ್ದರೆ ಸ್ವಲ್ಪ ಅತಿರೇಕದ ವರ್ತನೆ ತೋರಿದ ಪಾಂಡ್ಯ ಬ್ಯಾಟ್ ಕ್ರೀಸ್ ಗೆ ತಾಗಿಸಲು ತಡ ಮಾಡಿದರು. ತಾಗಿಸಿದರೂ ಸರಿಯಾಗಿ ಇಡದೇ ತಾವಾಗಿಯೇ ವಿಕೆಟ್ ಎದುರಾಳಿಗಳಿಗೆ ಹರಿವಾಣದಲ್ಲಿಟ್ಟು ದಾನ ಮಾಡಿದರು.

ಅವರ ಈ ರೀತಿಯ ವರ್ತನೆಯನ್ನು ನೋಡಿ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್, ಸಂಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಮಂಜ್ರೇಕರ್ ಅಂತೂ ಪಾಂಡ್ಯರದ್ದು ದುರಹಂಕಾರಿ ವರ್ತನೆ ಎಂದು ಬಣ್ಣಿಸಿದ್ದಾರೆ.

ಅದೇನೇ ಇರಲಿ, ಪಾಂಡ್ಯರ ಈ ವರ್ತನೆಯಿಂದಾಗಿ ಚೇತರಿಸಿಕೊಳ್ಳಬೇಕಿದ್ದ ಟೀಂ ಇಂಡಿಯಾ ಮತ್ತೆ ಕುಸಿಯುವಂತಾಯಿತು. ಅದೇನೇ ಇದ್ದರೂ ಇನ್ನೊಂದೆಡೆ ವಿರಾಟ್ ಕೊಹ್ಲಿ ಶತಕ ಗಳಿಸಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ 6 ವಿಕೆಟ್ ಕಳೆದುಕೊಂಡಿರುವ ಭಾರತಕ್ಕೆ ದ.ಆಫ್ರಿಕಾದ ಮೊದಲ ಇನಿಂಗ್ಸ್ ಮೊತ್ತ ದಾಟಲು 82 ರನ್ ಅಗತ್ಯವಿದೆ. ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 335 ರನ್ ಗಳಿಸಿತ್ತು. ಭಾರತ ಈಗಾಗಲೇ 253 ರನ್ ಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ಕಗಿಸೋ ರಬಡಾ ಕ್ರೀಸ್ ನಲ್ಲೇ ಜಗಳ