Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ನಲ್ಲಿ ತೆಂಡುಲ್ಕರ್ ದಾಖಲೆ ಮುರಿಯಲಿರುವ ಧೋನಿ

ನ್ಯೂಜಿಲೆಂಡ್ ನಲ್ಲಿ ತೆಂಡುಲ್ಕರ್ ದಾಖಲೆ ಮುರಿಯಲಿರುವ ಧೋನಿ
ಆಕ್ಲೆಂಡ್ , ಸೋಮವಾರ, 21 ಜನವರಿ 2019 (09:51 IST)
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆಯೊಂದನ್ನು ಮುರಿಯುವ ಅವಕಾಶ ಎದುರಾಗಿದೆ.


ಆಸ್ಟ್ರೇಲಿಯಾ ವಿರುದ್ಧದ ಅಮೋಘ ಫಾರ್ಮ್ ಮುಂದುವರಿಸಿದರೆ ಧೋನಿಗೆ ನ್ಯೂಜಿಲೆಂಡ್ ನಲ್ಲಿ ಭಾರತದ ಪರ ಗರಿಷ್ಠ ರನ್ ದಾಖಲಿಸಿದ ಕೀರ್ತಿಗೆ ಭಾಜನರಾಗಬಹುದು. ಸದ್ಯಕ್ಕೆ ತೆಂಡುಲ್ಕರ್ 18 ಪಂದ್ಯಗಳಿಂದ 652 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಿಂದ 598 ರನ್ ಗಳಿಸಿರುವ ಸೆಹ್ವಾಗ್ ದ್ವಿತೀಯ ಸ್ಥಾನದಲ್ಲಿದ್ದಾರೆ.

ತೃತೀಯ ಸ್ಥಾನದಲ್ಲಿರುವ ಧೋನಿಗೆ ಈ ದಾಖಲೆ ಮುರಿಯಲು ಇನ್ನು 197 ರನ್ ಗಳ ಅಗತ್ಯವಿದೆ. ಜನವರಿ 23 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ಪೇಜ್ ಗೆ ಧೋನಿ ಚಿತ್ರ ಹಾಕಿದ ಐಸಿಸಿ: ಅಭಿಮಾನಿಗಳು ಖುಷ್!