Select Your Language

Notifications

webdunia
webdunia
webdunia
webdunia

ಟೆಸ್ಟ್‌ಗಳಲ್ಲಿ ಅತೀ ಹೆಚ್ಚು ನಾಯಕತ್ವ ವಹಿಸಿದ ವಿಕೆಟ್‌ಕೀಪರ್ ಧೋನಿ

ಟೆಸ್ಟ್‌ಗಳಲ್ಲಿ ಅತೀ ಹೆಚ್ಚು ನಾಯಕತ್ವ ವಹಿಸಿದ ವಿಕೆಟ್‌ಕೀಪರ್  ಧೋನಿ
ಬ್ರಿಸ್ಬೇನ್ , ಶುಕ್ರವಾರ, 19 ಡಿಸೆಂಬರ್ 2014 (12:46 IST)
ಎಂಎಸ್ ಧೋನಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಫೀಲ್ಡಿಂಗ್‌ಗಿಳಿದಾಗ ಭಾರತದ ಹೆಚ್ಚು ಬಾರಿ ನಾಯಕತ್ವ ವಹಿಸಿದ ಟೆಸ್ಟ್ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧೋನಿ 89ನೇ ಟೆಸ್ಟ್ ನಾಯಕತ್ವ ವಹಿಸಿದ್ದು, ಸಯ್ಯದ್ ಕಿರ್ಮಾನಿಗಿಂತ ಒಂದು ಟೆಸ್ಟ್‌‍ ಹೆಚ್ಚಿಗೆ ಆಡಿದ್ದಾರೆ.

ರಾಂಚಿಯಲ್ಲಿ ಹುಟ್ಟಿದ ಧೋನಿ 2005ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌‍ಗೆ ಚೊಚ್ಚಲ ಪ್ರವೇಶ ಮಾಡಿದ್ದರು. 3 ದಿನಗಳು ಮಳೆಯಿಂದ ತೊಯ್ದ ಬಳಿಕ ಡ್ರಾನಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಧೋನಿ 30 ರನ್ ಗಳಿಸಿದ್ದರು.

ಎರಡನೇ ಟೆಸ್ಟ್‌ನಲ್ಲಿ ಧೋನಿ ಅಜೇಯ 51 ರನ್ ಬಾರಿಸುವ ಮೂಲಕ ಶ್ರೀಲಂಕಾದ ವಿರುದ್ಧ ಭಾರತದ ಗೆಲುವಿಗೆ ನೆರವಾಯಿತು. ಇದರಿಂದ ಟೆಸ್ಟ್ ತಂಡದಲ್ಲಿ ಧೋನಿ ಸ್ಥಾನ ಭದ್ರಗೊಂಡಿತು. ಪಾಕಿಸ್ತಾನದ ವಿರುದ್ಧ ತಮ್ಮ 5ನೇ ಟೆಸ್ಟ್ ಪಂದ್ಯದಲ್ಲಿ ಧೋನಿ ಶತಕ ಬಾರಿಸುವ ಮೂಲಕ ಭಾರತದ ಹೊರಗೆ ಏಕಮಾತ್ರ ಟೆಸ್ಟ್ ಶತಕವಾಗಿ ಉಳಿದಿದೆ.

ಅವರು ಇದುವರೆಗೆ ಆಡಿದ 89 ಟೆಸ್ಟ್‌ಗಳ ಪೈಕಿ 59 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಗಾಬಾದ ಪ್ರಥಮ ಇನ್ನಿಂಗ್ಸ್‌ನಲ್ಲಿ 33 ರನ್ ಗಳಿಸಿದ ನಂತರ ಅವರ ಹೆಸರಿನಲ್ಲಿ 4841 ರನ್‌ಗಳಿವೆ. ಆದರೆ ಉಪಖಂಡದ ಹೊರಗೆ ಶತಕ ಬಾರಿಸದಿರುವುದಕ್ಕೆ ಖಂಡಿತವಾಗಿ ಧೋನಿ ವಿಷಾದ ಪಡಬೇಕಾಗಿದೆ.

Share this Story:

Follow Webdunia kannada