Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯ ಅನುಪಸ್ಥಿತಿಯ ಲಾಭ ಪಡೆಯುತ್ತಾರಾ ರೋಹಿತ್ ಶರ್ಮಾ?!

ವಿರಾಟ್ ಕೊಹ್ಲಿಯ ಅನುಪಸ್ಥಿತಿಯ ಲಾಭ ಪಡೆಯುತ್ತಾರಾ ರೋಹಿತ್ ಶರ್ಮಾ?!
ದುಬೈ , ಶನಿವಾರ, 15 ಸೆಪ್ಟಂಬರ್ 2018 (09:23 IST)
ದುಬೈ: ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಸರಣಿ ಸೋತು ಅಭಿಮಾನಿಗಳು, ಮಾಜಿಗಳ ಕೈಯಲ್ಲಿ ಛೀಮಾರಿ ಹಾಕಿಸಿಕೊಂಡಿರುವ ಟೀಂ ಇಂಡಿಯಾ ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗುತ್ತಿದೆ.

ಆದರೆ ವಿರಾಟ್ ಕೊಹ್ಲಿ ಬದಲಿಗೆ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈಗಾಗಲೇ ಟೆಸ್ಟ್ ಮಾದರಿಯಲ್ಲಿ ಸ್ಥಾನ ಸಿಗದ ನಿರಾಶೆಯಲ್ಲಿರುವ ರೋಹಿತ್ ಶರ್ಮಾ, ಏಷ್ಯಾ ಕಪ್ ನ್ನು ತಮ್ಮ ಪ್ರತಿಷ್ಠೆಯ ಕಣವಾಗಿಸಿ ತಂಡಕ್ಕೆ ಗೆಲುವು ತಂದುಕೊಡುತ್ತಾರಾ ಎನ್ನುವ ನಿರೀಕ್ಷೆ ಅಭಿಮಾನಿಗಳದ್ದು.

ಒಂದು ವೇಳೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಗೆದ್ದರೆ ವಿರಾಟ್ ಕೊಹ್ಲಿ ನಾಯಕತ್ವವನ್ನು ತೆಗಳುವವರಿಗೆ ಮತ್ತಷ್ಟು ಗರಿ ಸಿಕ್ಕಂತಾಗುತ್ತದೆ. ಇತ್ತ ರೋಹಿತ್ ಕೂಡಾ ತಮ್ಮ ಸಾಮರ್ಥ್ಯವೇನೆಂದು ಆಯ್ಕೆಗಾರರಿಗೆ, ಕ್ರಿಕೆಟ್ ಪ್ರಭುಗಳಿಗೆ ತೋರಿಸಿಕೊಡುವ ಹಠದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕರಾಗಿಯೂ ಅವರು ಗೆದ್ದರೆ ಅವರಿಗೆ ಅದು ಪ್ಲಸ್ ಪಾಯಿಂಟ್ ಆಗಲಿದೆ. ಈಗಾಗಲೇ ತಮ್ಮ ನಾಯಕತ್ವದಲ್ಲಿ ಎರಡು ಸರಣಿ ಗೆಲುವು ದಾಖಲಿಸಿಕೊಟ್ಟಿರುವ ರೋಹಿತ್ ಶರ್ಮಾಗೆ ಏಷ್ಯಾ ಕಪ್ ಎಲ್ಲಾ ರೀತಿಯಿಂದಲೂ ಮಹತ್ವದ ಸರಣಿಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಆಟಗಾರರನ್ನು ಹೇಗೆ ನಡೆಸಿಕೊಳ್ಳಬೇಕೆಂದು ವಿರಾಟ್ ಕೊಹ್ಲಿಗೆ ಗಂಗೂಲಿ ಕೊಟ್ಟ ಸಲಹೆ ಏನು ಗೊತ್ತಾ?