Select Your Language

Notifications

webdunia
webdunia
webdunia
webdunia

ಕೋಚ್ ರವಿಶಾಸ್ತ್ರಿ ಎಲ್ಲದಕ್ಕೂ ತಲೆಯಾಡಿಸುವ ವ್ಯಕ್ತಿ ಅಲ್ಲ ಎಂದ ವಿರಾಟ್ ಕೊಹ್ಲಿ

ಕೋಚ್ ರವಿಶಾಸ್ತ್ರಿ ಎಲ್ಲದಕ್ಕೂ ತಲೆಯಾಡಿಸುವ ವ್ಯಕ್ತಿ ಅಲ್ಲ ಎಂದ ವಿರಾಟ್ ಕೊಹ್ಲಿ
ಮುಂಬೈ , ಶುಕ್ರವಾರ, 16 ನವೆಂಬರ್ 2018 (11:18 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನಾಯಕ ವಿರಾಟ್ ಕೊಹ್ಲಿ ಹೇಳಿದಂತೆ ಕೇಳುವ ಕೈಗೊಂಬೆ ಎಂದು ಎಲ್ಲರೂ ಟೀಕಿಸುತ್ತಾರೆ. ಆದರೆ ಅವರು ಹಾಗಲ್ಲ ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಎಲ್ಲರೂ ಹೀಗೆ ಹೇಳುವುದು ನೋಡಿದರೆ ನನಗೆ ಅಚ್ಚರಿಯೆನಿಸುತ್ತದೆ. ಇದಕ್ಕಿಂತ ಅರ್ಥಹೀನ ವಿಚಾರ ಇನ್ನೊಂದಿಲ್ಲ. ನಿಜ ಹೇಳಬೇಕೆಂದರೆ ರವಿಶಾಸ್ತ್ರಿಯಷ್ಟು ಯಾರೂ ನನ್ನ ಅಭಿಪ್ರಾಯಗಳನ್ನು ವಿರೋಧಿಸಿಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ನಾನು 2014 ಇಂಗ್ಲೆಂಡ್ ಸರಣಿಯಲ್ಲಿ ದಯನೀಯ ವೈಫಲ್ಯವಾದ ಬಳಿಕ ನನ್ನ ಬ್ಯಾಟಿಂಗ್ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ರವಿಶಾಸ್ತ್ರಿ. ಅವರು ನನಗೆ ಹಲವು ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನನ್ನ ಹಾಗೆ ಬೇರೆ ಆಟಗಾರರಿಗೂ ಅವರ ಸಾಮರ್ಥ್ಯ ಹೊರತೆಗೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವ್ಯಕ್ತಿ ನಿರ್ವಹಣೆ ಮಾಡುವುದು ಹೇಗೆ ಎಂದು ರವಿಶಾಸ್ತ್ರಿಗೆ ಚೆನ್ನಾಗಿ ಗೊತ್ತು’ ಎಂದು ಕೊಹ್ಲಿ ಕೋಚ್ ಶಾಸ್ತ್ರಿಯನ್ನು ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್, ಕೊಹ್ಲಿ ದಾಖಲೆಯನ್ನೂ ಮೀರಿದ ಮಿಥಾಲಿ ರಾಜ್ ಗೆ ಕಪ್ ಗೆದ್ದು ಬಾ ಎಂದು ಹಾರೈಸಿದ ಅಭಿಮಾನಿಗಳು!