Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಸ್ಫೋಟಕ ಶತಕ: ಪುಣೆ ವಿರುದ್ಧ ಆರ್‌ಸಿಬಿಗೆ ಗೆಲುವು

ವಿರಾಟ್ ಕೊಹ್ಲಿ ಸ್ಫೋಟಕ ಶತಕ: ಪುಣೆ ವಿರುದ್ಧ ಆರ್‌ಸಿಬಿಗೆ ಗೆಲುವು
ಬೆಂಗಳೂರು , ಶನಿವಾರ, 7 ಮೇ 2016 (19:57 IST)
ಬೆಂಗಳೂರು: ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡವು ಪುಣೆ ಸೂಪರ್ ಜೇಂಟ್ಸ್ ಬೃಹತ್ ಸ್ಕೋರಿನ ಗಡಿ ದಾಟಿ ವಿಜಯದ ಕೇಕೆ ಹಾಕಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿಗೆ ಈ ಗೆಲುವು ಚೇತರಿಕೆ ನೀಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೇರಲು ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ಹೆಚ್ಚು ಕಡಿಮೆ ಗೆಲ್ಲಬೇಕಾಗಿದೆ. ಬೌಲಿಂಗ್ ವೈಫಲ್ಯದಿಂದ ಬಳಲುತ್ತಿರುವ ಆರ್‌ಸಿಬಿ ತಂಡಕ್ಕೆ ಈ ಬಾರಿಯೂ ಅದು ಕಾಡಿ ಪುಣೆ ತಂಡಕ್ಕೆ 191 ರನ್ ಗಳಿಸಲು ಅವಕಾಶ ನೀಡಿತು.

ಆದರೆ ವಿರಾಟ್ ಕೊಹ್ಲಿ ಅವರ 58 ಎಸೆತಗಳಲ್ಲಿ 108 ರನ್ ಶತಕದ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ ಗೆಲುವು ಗಳಿಸಿತು. ಕೊಹ್ಲಿಯ ಸ್ಕೋರಿನಲ್ಲಿ 8 ಬೌಂಡರಿ ಮತ್ತು7 ಸಿಕ್ಸರ್‌ಗಳಿದ್ದವು. ಕೊಹ್ಲಿ ಈ ಶತಕದ ಮೂಲಕ  ಟಿ 20ಯಲ್ಲಿ 6000 ರನ್‌ಗಳ ಹೊಸ ದಾಖಲೆ ನಿರ್ಮಿಸಿದ್ದಾರೆ.  ಆರ್‌ಸಿಬಿ ಒಂದು ಹಂತದಲ್ಲಿ 17 ಓವರುಗಳಲ್ಲಿ 152 ರನ್ ಗಳಿಸಿತ್ತು. ಗೆಲ್ಲುವುದಕ್ಕೆ 3 ಓವರುಗಳಲ್ಲಿ 40 ರನ್ ಅಗತ್ಯವಿತ್ತು. 18ನೇ ಓವರಿನಲ್ಲಿ ಕೊಹ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 18 ರನ್ ಬಾರಿಸಿದರು.

19ನೇ ಓವರಿನಲ್ಲಿ ಮತ್ತೆ  2 ಸಿಕ್ಸರ್ ನೆರವಿನಿಂದ ಒಟ್ಟು 18 ರನ್ ಕೊಹ್ಲಿ ಗಳಿಸಿದರು. ಕೊನೆಯ ಓವರಿನಲ್ಲಿ ಕೊಹ್ಲಿ ಒಂದು ಬೌಂಡರಿ ಬಾರಿಸುವ ಮೂಲಕ ಗೆಲುವಿನ ಗಡಿಯನ್ನು ದಾಟಿದರು. ಆರ್‌ಸಿಬಿ 19.3 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ವಿಜಯದ ಗಡಿಯನ್ನು ದಾಟಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಪುಣೆ ತಂಡವನ್ನು ಔಟ್ ಮಾಡಲು ಆರ್‌ಸಿಬಿ ಬೌಲರುಗಳು ತಿಣುಕಾಡಿದರು. ಶೇನ್ ವಾಟ್ಸನ್  3 ವಿಕೆಟ್ ಕಬಳಿಸಿ ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿದರು.  ಪುಣೆ ಪರ ರೆಹಾನೆ 74 ರನ್ ಸೌರಬ್ ತಿವಾರಿ 52 ರನ್ ಗಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮೇ 13ರಂದು ಪೋಲೆಂಡ್ ಆಂಡ್ರೆಜ್ ಸೋಲ್ಡ್ರಾ, ವಿಜೇಂದರ್ ಹಣಾಹಣಿ