ಈ ಸ್ಪೆಷಲ್ ಸ್ಥಳದಲ್ಲಿ ಪತ್ನಿ ಜತೆ ಬರ್ತ್ ಡೇ ಆಚರಿಸಿಕೊಳ್ಳಲಿರುವ ವಿರಾಟ್ ಕೊಹ್ಲಿ

ಸೋಮವಾರ, 5 ನವೆಂಬರ್ 2018 (06:55 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದು, ಪತ್ನಿ ಜತೆ ವೈಯಕ್ತಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ನವಂಬರ್ 5 ರಂದು 30 ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಕೊಹ್ಲಿ ಈ ಬಾರಿ ಪತ್ನಿ ಜತೆಗೆ ಬರ್ತ್ ಡೇ ಸಂಭ್ರಮ ಆಚರಿಸಿಕೊಳ್ಳಲು ವಿಶೇಷ ಸ್ಥಳವನ್ನೇ ಆರಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಪಾರ್ಟಿ ಮಾಡಿ ತಮ್ಮ ಸ್ನೇಹಿತರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಾರೆ. ಆದರೆ ಕೊಹ್ಲಿ ತಮ್ಮ ಬರ್ತ್ ಡೇ ದಿನ ಧಾರ್ಮಿಕ ಕೇಂದ್ರ ಹರಿದ್ವಾರದಲ್ಲಿ ಕಳೆಯಲಿದ್ದಾರೆ. ಈಗಾಗಲೇ ಡೆಹ್ರಾಡೂನ್ ಗೆ ಪತ್ನಿ ಜತೆಗೆ ಬಂದಿಳಿದಿರುವ ಕೊಹ್ಲಿ ಇಲ್ಲಿನ ಪಂಚತಾರಾ ಹೋಟೆಲ್ ಒಂದರಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿ ಅನುಷ್ಕಾರ ಕುಟುಂಬದ ಗುರುಗಳಾದ ಮಹಾರಾಜ್ ಅನಂತ್ ಬಾಬಾ ಆಶ್ರಮಕ್ಕೆ ದಂಪತಿ ಭೇಟಿ ನೀಡಲಿದ್ದಾರೆ. ಬಳಿಕ ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಕಳೆಯಲಿದ್ದಾರೆ ಎಂದು ಸುದ್ದಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಟೀಂ ಇಂಡಿಯಾದಲ್ಲಿ ಕ್ಲಿಕ್ ಆಗುತ್ತಿರುವಾಗಲೇ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಅಂಬಟಿ ರಾಯುಡು