Select Your Language

Notifications

webdunia
webdunia
webdunia
webdunia

ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿದ್ದರೆ ಕಾಮೆಂಟರಿ ಬಾಕ್ಸ್ ನಲ್ಲಿದ್ದ ಅನಿಲ್ ಕುಂಬ್ಳೆ ಮೊಗದಲ್ಲಿ ನಗು

ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿದ್ದರೆ ಕಾಮೆಂಟರಿ ಬಾಕ್ಸ್ ನಲ್ಲಿದ್ದ ಅನಿಲ್ ಕುಂಬ್ಳೆ ಮೊಗದಲ್ಲಿ ನಗು
ದುಬೈ , ಗುರುವಾರ, 20 ಸೆಪ್ಟಂಬರ್ 2018 (07:15 IST)
ದುಬೈ: ಏಷ್ಯಾ ಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಪಾಕ್ ಪಂದ್ಯಕ್ಕೆ ಇಡೀ ವಿಶ್ವವೇ ಎದುರು ಕಾಯುತ್ತಿತ್ತು. ಟೀಂ ಇಂಡಿಯಾ ಪಾಕ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದಾಗ ಡಗ್ ಔಟ್ ನಲ್ಲಿ ಕಾಮೆಂಟರಿ ಹೇಳುತ್ತಿದ್ದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮೊಗದಲ್ಲೂ ತೃಪ್ತಿಯ ನಗು.

ಕಳೆದ ಬಾರಿ ಭಾರತ ಪಾಕ್ ಎದುರಾಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ. ಆಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದರು. ಕೊಹ್ಲಿ ನೇತೃತ್ವದ ಹುಡುಗರು ಪಾಕ್ ಎದುರು ಹೀನಾಯವಾಗಿ ಸೋತ ಹತಾಶೆ ಕುಂಬ್ಳೆಗೆ ಆಗಿತ್ತು.

ಆ ಸೋಲಿನ ಸೇಡು ಇಂದಿಗೆ ಪೂರ್ತಿಯಾಗಿದೆ. ಪಾಕಿಸ್ತಾನ ನೀಡಿದ 163 ರನ್ ಗಳ ಸಾಧಾರಣ ಗುರಿಯನ್ನು ಟೀಂ ಇಂಡಿಯಾ ಕೇವಲ 2 ವಿಕೆಟ್ ಕಳೆದುಕೊಂಡು 29 ಓವರ್ ಗಳಲ್ಲೇ ಪೂರ್ತಿಗೊಳಿಸಿತು. ಆ ಮೂಲಕ 8 ವಿಕೆಟ್ ಗಳ ಜಯ ಸಾಧಿಸಿತು.

ಭಾರತದ ಪರ ಶಿಖರ್ ಧವನ್ 46, ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಅಂಬುಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ತಲಾ ಅಜೇಯ 31  ರನ್ ಗಳಿಸಿದರು. ಇದರೊಂದಿಗೆ ಭಾರತ ಕೂಟದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ವಿರುದ್ಧದ ಪಾಕಿಸ್ತಾನದ ಪಂದ್ಯದಲ್ಲಿ ಭಾರತವೇ ಫೇವರಿಟ್ ಎಂದ ಭಜ್ಜಿ..!!