Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ಟಿ20: ಟೀಂ ಇಂಡಿಯಾದಲ್ಲಿ ಇಂದು ಸಹೋದರರ ಕಮಾಲ್!

ಭಾರತ-ನ್ಯೂಜಿಲೆಂಡ್ ಟಿ20: ಟೀಂ ಇಂಡಿಯಾದಲ್ಲಿ ಇಂದು ಸಹೋದರರ ಕಮಾಲ್!
ವೆಲ್ಲಿಂಗ್ಟನ್ , ಬುಧವಾರ, 6 ಫೆಬ್ರವರಿ 2019 (12:19 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.


ಈ ಪಂದ್ಯದಲ್ಲಿ ಭಾರತ ತಂಡದ ಪರ ಸಹೋದರರ ಜೋಡಿಯೊಂದು ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ. ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಇಬ್ಬರೂ ಇಂದು ಆಡುವ ಬಳಗದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಈ ಮೂಲಕ ಒಂದೇ ಪಂದ್ಯದಲ್ಲಿ ಕಣಕ್ಕಿಳಿದ ಮೂರನೇ ಸಹೋದರ ಜೋಡಿ ಎಂಬ ಖ್ಯಾತಿಗೆ ಪಾತ್ರರಾದರು.

ಇನ್ನು, ಧೋನಿ ಅಲ್ಲದೆ, ರಿಷಬ್ ಪಂತ್, ದಿನೇಶ್ ಕಾರ್ತಿಕ್ ಸೇರಿದಂತೆ ಮೂವರು ವಿಕೆಟ್ ಕೀಪರ್ ಗಳು ಇಂದು ಆಡುತ್ತಿದ್ದಾರೆ. ಅವರ ಹೊರತಾಗಿ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಗೆ ಜತೆಯಾಗಿ ಯಜುವೇಂದ್ರ ಚಾಹಲ್, ಖಲೀಲ್ ಅಹಮ್ಮದ್ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹೋದಲೆಲ್ಲಾ ಫೋಟೋಗ್ರಾಫರ್ ರನ್ನೂ ಕರೆದೊಯ್ಯುತ್ತೀರಾ? ಪತ್ನಿ ಜತೆಗಿನ ಫೋಟೋಗೆ ಟ್ರೋಲ್ ಆದ ಕೊಹ್ಲಿ