ವಿಮಾನ ಬಿಟ್ಟು ಬಸ್ ನಲ್ಲೇ ಗಂಟೆಗಟ್ಟಲೆ ಸಂಚರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು!

ಭಾನುವಾರ, 3 ಫೆಬ್ರವರಿ 2019 (09:04 IST)
ಆಕ್ಲೆಂಡ್: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸುವುದು ಬಿಸಿಸಿಐಗೆ ದೊಡ್ಡ ವಿಷಯವೇ ಅಲ್ಲ. ಆದರೆ ಇದೀಗ ಐದನೇ ಏಕದಿನ ಪಂದ್ಯ ನಿಗದಿಯಾಗಿದ್ದ ವೆಲ್ಲಿಂಗ್ಟನ್ ಗೆ ಬರಲು ಕ್ರಿಕೆಟಿಗರು ವಿಮಾನ ಬಿಟ್ಟು ಗಂಟೆಗಟ್ಟಲೆ ಬಸ್ ನಲ್ಲೇ ಸಂಚರಿಸಿದ್ದಾರೆ.


ಹ್ಯಾಮಿಲ್ಟನ್ ನಿಂದ ಆಕ್ಲೆಂಡ್ ಗೆ ವಿಮಾನದಲ್ಲಿ 90 ನಿಮಿಷಗಳ ಹಾದಿಯಿದೆ. ಆದರೆ ಕ್ರಿಕೆಟಿಗರು ವಿಮಾನವೇರದೇ ಬಸ್ ಮೂಲಕವೇ ನಾಲ್ಕು ಗಂಟೆ ಪ್ರಯಾಣ ಮಾಡಿ ನಿಗದಿತ ಸ್ಥಳ ತಲುಪಿದ್ದಾರೆ. ಬಳಿಕ ಅಲ್ಲಿಂದ ವಿಮಾನ ಮೂಲಕ ವೆಲ್ಲಿಂಗ್ಟನ್ ಗೆ ಪ್ರಯಾಣಿಸಿದ್ದಾರೆ.

ಇದಕ್ಕೆ ನಿಜವಾದ ಕಾರಣವೇನೆಂದು ಇನ್ನೂ ಬಹಿರಂಗವಾಗಿಲ್ಲ. ಅತ್ತ ನ್ಯೂಜಿಲೆಂಡ್ ಆಟಗಾರರು ಬಸ್ ನಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿ ಸುಸ್ತು ಮಾಡಿಕೊಳ್ಳದೇ ವಿಮಾನ ಮೂಲಕ ಒಂದು ಗಂಟೆಯೊಳಗೆ ನಿಗದಿತ ಸ್ಥಳ ತಲುಪಿದ್ದಾರೆ. ಈ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟನೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING