Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾದಲ್ಲಿ ಅಭ್ಯಾಸದ ನಡುವೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿಮಾನಿಗಳ ಕಾಟ

ಆಸ್ಟ್ರೇಲಿಯಾದಲ್ಲಿ ಅಭ್ಯಾಸದ ನಡುವೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿಮಾನಿಗಳ ಕಾಟ
ಸಿಡ್ನಿ , ಸೋಮವಾರ, 19 ನವೆಂಬರ್ 2018 (08:53 IST)
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರು ಗಬ್ಬಾ ಮೈದಾನದಲ್ಲಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ.

ಆದರೆ ತರಬೇತಿ ನಡುವೆ ಭಾರತೀಯ ಮೂಲದ ಅಭಿಮಾನಿಗಳು ಕ್ರಿಕೆಟಿಗರನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅಭ್ಯಾಸದ ನಡುವೆ ಕೆಲವು ಕಾಲ ಅಭಿಮಾನಿಗಳ ಜತೆ ಫೋಟೋಗೆ ಪೋಸ್ ನೀಡಿ ಅವರನ್ನು ಖುಷಿಪಡಿಸಿದ್ದಾರೆ.

ಭಾರತ ಆಸ್ಟ್ರೇಲಿಯಾ ಪ್ರವಾಸ ಹೋದಾಗಲೆಲ್ಲಾ ಈ ರೀತಿ ಭಾರತೀಯ ಮೂಲದ ಅಭಿಮಾನಿಗಳು ಪ್ರೀತಿಯಿಂದ ಕಾಟ ಕೊಡುವುದಿದೆ. ಆಡುವಾಗಲೂ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಜರಿದ್ದು, ಭಾರತದ ಕ್ರಿಕೆಟಿಗರಿಗೆ ತವರಿನ ವಾತಾವರಣ ನೀಡುತ್ತಾರೆ ಇಲ್ಲಿನ ಭಾರತೀಯ ಮೂಲದವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಟಗಾರರಿಗೆ ಬಸ್ ಚಾಲಕನಾಗಿದ್ದ ಧೋನಿ!